ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ

ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ವೈಟ್ ವಾಶ್ ಮಾಡುವ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವ ಚಾಂಪಿಯನ್ ಶಿಪ್  ಪಟ್ಟಿಯಲ್ಲಿ  ಪರಾಕ್ರಮ ಮೆರೆದಿದೆ. 
ಉಮೇಶ್ ಯಾದವ್, ಮೊಹಮ್ಮದ್ ಶಮಿ
ಉಮೇಶ್ ಯಾದವ್, ಮೊಹಮ್ಮದ್ ಶಮಿ

ದುಬೈ: ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ವೈಟ್ ವಾಶ್ ಮಾಡುವ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವ ಚಾಂಪಿಯನ್ ಶಿಪ್  ಪಟ್ಟಿಯಲ್ಲಿ  ಪರಾಕ್ರಮ ಮೆರೆದಿದೆ. 

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆಲುವು ಸಾಧಿಸಿದ ಟೀಂ ಇಂಡಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಜಯಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ  240 ಅಂಕಗಳನ್ನು ಪಡೆದುಕೊಂಡಿದೆ. 

 ರಾಂಚಿಯಲ್ಲಿ ಇಂದು ಬೆಳಗ್ಗೆ 202 ರನ್ ಗಳ ಇನ್ನಿಂಗ್ಸ್ ಜಯದೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಎರಡು ಟೆಸ್ಟ್ ಸರಣಿಗಳಿಂದ ತಲಾ 120 ಅಂಕಗಳಂತೆ  ಒಟ್ಟಾರೇ, 240 ಅಂಕಗಳನ್ನು ಪಡೆಯುವ ಮೂಲಕ  ಟೀಂ ಇಂಡಿಯಾ, ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದಾಗಿ ಐಸಿಸಿ ತಿಳಿಸಿದೆ.

ನವೆಂಬರ್ 14 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದರೆ ಟೀಂ ಇಂಡಿಯಾ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗಲಿದೆ. 

ಒಟ್ಟಾರೇ ,ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್  ಅಂಕಗಳನ್ನು ಗಮನಿಸುವುದಾದರೆ ಭಾರತ 240 ಅಂಕಗಳೊಂದಿಗೆ ಮೊದಲನೇಯ ಸ್ಥಾನದಲ್ಲಿದ್ದರೆ,  ನ್ಯೂಜಿಲೆಂಡ್ 120 ಅಂಕಗಳೊಂದಿಗೆ 2, ಶ್ರೀಲಂಕಾ 3, ಆಸ್ಟ್ರೇಲಿಯಾ 4, ಇಂಗ್ಲೆಂಡ್ 5, ವೆಸ್ಟ್ ಇಂಡೀಸ್ 6, ದಕ್ಷಿಣ ಆಫ್ರಿಕಾ 7, ಬಾಂಗ್ಲಾದೇಶ 8, ಪಾಕಿಸ್ತಾನ 9ನೇ ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com