ಕೊಹ್ಲಿ ನಾಯಕತ್ವದ ಟೀಂ ಇಂಡಿಯಾವನ್ನು ಮಣಿಸುವುದು ತುಂಬ ಕಷ್ಟ: ಆಫ್ರಿಕಾ ನಾಯಕ ಡುಪ್ಲೆಸಿಸ್

ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ನಮ್ಮ ಮೇಲೆ ಪಾರಮ್ಯ ಮೆರೆದರು ಎಂದು ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದರು.
ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್
ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್

ರಾಂಚಿ: ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ನಮ್ಮ ಮೇಲೆ ಪಾರಮ್ಯ ಮೆರೆದರು ಎಂದು ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದರು.

ಇಲ್ಲಿನ ಜೆಎಸ್‍ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಹಾಗೂ 202 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ಹರಿಣಗಳ ನಾಯಕ ಫಾಫ್ ಡುಪ್ಲೆಸಿಸ್, ಪ್ರಸಕ್ತ ಸರಣಿ ನಮ್ಮ ಪಾಲಿಗೆ ಕಠಿಣವಾಗಿತ್ತು. ಮತ್ತೊಮ್ಮೆ ಬಲಿಷ್ಟ ಬ್ಯಾಟಿಂಗ್ ಪಡೆಯೊಂದಿಗೆ ಭಾರತಕ್ಕೆ ಪ್ರವಾಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವನ್ನು ಎದುರಿಸುವುದು ನಿಜಕ್ಕೂ ಕಷ್ಟ. ಸರಣಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಮೂರು ವಿಭಾಗಗಳಲ್ಲಿ ನಮ್ಮ ಮೇಲೆ ಪ್ರಭುತ್ವ ಸಾಧಿಸಿತು. ವಿಶೇಷವಾಗಿ ಭಾರತದ ವೇಗಿಗಳನ್ನು ಎದುರಿಸುವುದು ಕಠಿಣವಾಗಿತ್ತು. ಭಾರತದ ವೇಗಿಗಳಿಗೆ ನಮ್ಮ ತಂಡದ ವೇಗಿಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಸರಣಿ ಆರಂಭಕ್ಕೂ ಮುನ್ನ ಭಾರತದ ಸ್ಪಿನ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದೇ ಸಂಗತಿ ಮನಸಿನಲ್ಲಿಟ್ಟುಕೊಂಡು ಭಾರತಕ್ಕೆ ಬಂದಿದ್ದೆವು. ಏಕೆಂದರೆ, 2015ರ ಬಳಿಕ ಇಲ್ಲಿನ ಪಿಚ್‍ಗಳಿಗೆ ಪೂರಕವಾಗಿ ಸಿದ್ಧಪಡಿಸಲಾಗಿದೆ.

ನಮ್ಮದು ಯುವ ಆಟಗಾರರನ್ನು ಒಳಗೊಂಡ ತಂಡವಾಗಿದ್ದು, ಇನ್ನೂ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಇವರೆಲ್ಲ ಅನುಭವಿಗಳಾಗಿರುತ್ತಾರೆ ಎಂದು ಡುಪ್ಲೆಸಿಸ್ ಹೇಳಿದರು. ದಕ್ಷಿಣ ಆಫ್ರಿಕಾ ಡಿಸೆಂಬರ್ 26 ರಿಂದ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com