ಪ್ರಥಮ ದರ್ಜೆ ಕ್ರಿಕೆಟ್‍ಗೆ ಅಭಿಷೇಕ್ ನಾಯರ್ ಗುಡ್ ಬೈ

ಮುಂಬೈ ಹಲವು ಬಾರಿ ರಣಜಿ ಟ್ರೋಫಿ ಗೆಲುವಿಗೆ ತಂಡದ ಪ್ರಮುಖ ಅಸ್ತ್ರವಾಗಿದ್ದ ಹಿರಿಯ ಆಲ್ ರೌಂಡರ್ ಅಭಿಷೇಕ್ ನಾಯರ್ ಅವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.
ಅಭಿಷೇಕ್ ನಾಯರ್
ಅಭಿಷೇಕ್ ನಾಯರ್

ನವದೆಹಲಿ: ಮುಂಬೈ ಹಲವು ಬಾರಿ ರಣಜಿ ಟ್ರೋಫಿ ಗೆಲುವಿಗೆ ತಂಡದ ಪ್ರಮುಖ ಅಸ್ತ್ರವಾಗಿದ್ದ ಹಿರಿಯ ಆಲ್ ರೌಂಡರ್ ಅಭಿಷೇಕ್ ನಾಯರ್ ಅವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್‍ನಲ್ಲಿ (ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಟ್ರಿಬ್ಯಾಂಗೊ ನೈಟ್ ರೈಡರ್ಸ್ ತಂಡದ ಜತೆ ಇದ್ದಾಗ) ಇದ್ದ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್‍ಗೆ ಪತ್ರ ಸಲ್ಲಿಸಿದ್ದೇನೆ. ಈ ಎರಡು ಸಂಸ್ಥೆಗಳು, ಕೋಚ್‍ಗಳು, ಸಹ ಆಟಗಾರರು, ಕುಟುಂಬ ಹಾಗೂ ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ ಎಂದು ನಾಯರ್ ಹೇಳಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಹಾಗೂ ಮಧ್ಯಮ ವೇಗಿ ಅಭಿಷೇಕ್ ನಾಯರ್(36) 99 ಪ್ರಥಮ ದರ್ಜೆ ಪಂದ್ಯಗಳಾಡಿದ್ದಾರೆ. 2017-18 ಸಾಲಿನಲ್ಲಿ ಮುಂಬೈ ತಂಡದಿಂದ ಕೈ ಬಿಡಲಾಗಿತ್ತು. ನಂತರ ಅವರು ಪುದುಚೇರಿಗೆ ವಲಸೆ ಹೋಗಿದ್ದರು. ಅಲ್ಲಿ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಾಡಿದ್ದರು. ಸಿಕ್ಕಿಂ ವಿರುದ್ಧ ಕೊನೆಯ ಪ್ರಥಮ ದರ್ಜೆ ಇನಿಂಗ್ಸ್ ನಲ್ಲಿ ನಾಯರ್ ಐದು ವಿಕೆಟ್ ಪಡೆದಿದ್ದರು. 2009ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮೂರು ಏಕದಿನ ಪಂದ್ಯಗಳಾಡಿದ್ದರು. ಈ ಮೂರು ಪಂದ್ಯಗಳಲ್ಲಿ ವಿಕೆಟ್ ಹಾಗೂ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಅವರನ್ನು ಕೈ ಬಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com