ಧೋನಿ ಸಾಧನೆಗಳಿಂದ ಇಡೀ ದೇಶವೇ ಹೆಮ್ಮೆಪಡುವಂತಾಗಿದೆ: ಸೌರವ್ ಗಂಗೂಲಿ

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ರಾಂಚಿ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಚಾಂಪಿಯನ್ನರು ಬೇಗನೇ ಕೊನೆಗೊಳ್ಳುವುದಿಲ್ಲ. ನಾನು ಇರುವವರೆಗೂ ಪ್ರತಿಯೊಬ್ಬರನ್ನು ಗೌರವಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.

ಧೋನಿ ಮನದಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಧೋನಿಯನ್ನು ಪಡೆದಿರುವುದಕ್ಕೆ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುತ್ತಿದೆ. ನಾನು ಇರುವವರೆಗೂ ಪ್ರತಿಯೊಬ್ಬರನ್ನು ಗೌರವಿಸಲಾಗುವುದು. ಧೋನಿ ಸಾಧನೆಗಳು ಭಾರತವನ್ನು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದೆ ಎಂದು ದಾದಾ ವಿವರಿಸಿದರು.

ಧೋನಿ ಜತೆಗೆ ತಮ್ಮದೇ ಕೆರಿಯರ್ ಹೋಲಿಸಿರುವ ಗಂಗೂಲಿ, ನನ್ನನ್ನು ತಂಡದಿಂದ ಕೈಬಿಟ್ಟಾಗ ನಾನು ಕಮ್‌ಬ್ಯಾಕ್ ಮಾಡಲಿದ್ದೇನೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ನಾನು ಕಮ್‌ಬ್ಯಾಕ್ ಮಾಡಿ ಮತ್ತೆ ನಾಲ್ಕು ವರ್ಷ ಆಡಿದ್ದೇನೆ. ಚಾಂಪಿಯನ್‌ಗಳು ಬೇಗನೇ ಕೊನೆಗೊಳ್ಳುವುದಿಲ್ಲ ಎಂದರು.

ಗಂಗೂಲಿ ಈ ಹೇಳಿಕೆ ಮುಂದಿನ ವಿಶ್ವಕಪ್ ವರೆಗೂ ಧೋನಿ ಆಡಲು ಸಾಧ್ಯವೇ ಎಂಬ ಬಗ್ಗೆ ಕುತೂಹಲ ಮೂಡಿಸಿದೆ. ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ವೇಳೆಯಲ್ಲೇ ಅಕ್ಟೋಬರ್ 24ರಂದು ಆಯ್ಕೆ ಸಮಿತಿ ಜತೆ ಧೋನಿ ಭವಿಷ್ಯದ ಬಗ್ಗೆ ಚರ್ಚಿಸಲಾಗುವುದು ಎಂದು ಗಂಗೂಲಿ ಸ್ಪಷ್ಟಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com