ಭಾರತಕ್ಕೆ ಶಾಶ್ವತ ಟೆಸ್ಟ್ ಕೇಂದ್ರಗಳು ಬೇಕು: ಕೊಹ್ಲಿ ಸಲಹೆಗೆ ದನಿಗೂಡಿಸಿದ ಅನಿಲ್ ಕುಂಬ್ಳೆ

ಟೆಸ್ಟ್‌ ಪಂದ್ಯಗಳಿಗೆ ಕೇವಲ ಐದು ಕೇಂದ್ರಗಳನ್ನು ನಿಗದಿಪಡಿಸಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಸಲಹೆ ನೀಡಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆೆ ಧನಿಗೂಡಿಸಿದ್ದಾರೆ.
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ನವದೆಹಲಿ: ಟೆಸ್ಟ್‌ ಪಂದ್ಯಗಳಿಗೆ ಕೇವಲ ಐದು ಕೇಂದ್ರಗಳನ್ನು ನಿಗದಿಪಡಿಸಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಸಲಹೆ ನೀಡಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆೆ ಧನಿಗೂಡಿಸಿದ್ದಾರೆ.

1980 ಹಾಗೂ 90 ದಶಕದಲ್ಲಿ ಟೆಸ್ಟ್‌ ಪಂದ್ಯಗಳಿಗೆ ನಿಗದಿಪಡಿಸುತ್ತಿದ್ದ ವಿಶೇಷ ಕೇಂದ್ರಗಳ ರೀತಿಯಲ್ಲೇ ಇಂದು ಕೂಡ ಅದೇ ಸಾಂಪ್ರದಾಯವನ್ನು ಬಿಸಿಸಿಐ ಅನುಸರಿಸಬೇಕು. ಈ ಹಿಂದೆ ಹೊಸ ವರ್ಷದ ದಿನಗಳಲ್ಲಿ ಕೊಲ್ಕತ್ತಾ ಹಾಗೂ ಪೊಂಗಲ್ ಸಮಯದಲ್ಲಿ ಚೆನ್ನೈ ನಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಇದರಿಂದ ಟೆಸ್ಟ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಅಂಗಳಕ್ಕೆೆ ಆಗಮಿಸುತ್ತಿದ್ದರು.

‘ದೀರ್ಘ ಅವಧಿಯ ಕ್ರಿಕೆಟ್ ಅನ್ನೂ ಹೆಚ್ಚು ಪ್ರಚಾರ ಮಾಡಲು ಇದೊಂದು ಅತ್ಯುತ್ತಮ ಹಾದಿಯಾಗಿದೆ. ದೇಶದ ಕೆಲ ಕೇಂದ್ರಗಳನ್ನು ಆಯ್ಕೆ ಮಾಡುವ ಬದಲು ನಿಯಮಿತ ಕೇಂದ್ರಗಳನ್ನು ನಿರ್ದಿಷ್ಟ ಸಮಯದಲ್ಲಿ ಆಯ್ಕೆ ಮಾಡುವುದರಿಂದ ಟೆಸ್ಟ್‌ ಪಂದ್ಯಕ್ಕೆೆ ಸಹಕಾರ ಇನ್ನಷ್ಟು ಸಿಗಲಿದೆ ಎಂದು ಕುಂಬ್ಳೆೆ ಹೇಳಿದ್ದಾರೆ.

ಪೊಂಗಲ್ ಹಬ್ಬದ ಸಮಯದಲ್ಲಿ ಚೆನ್ನೈನಲ್ಲಿ ಟೆಸ್ಟ್‌ ಪಂದ್ಯ ಆಯೋಜಿಸುತ್ತಿದ್ದದ್ದನ್ನು ನೆನಪಿಸಿಕೊಳ್ಳಬಹುದು. ಆವೃತ್ತಿಯ ಮೊದಲ ಪಂದ್ಯವನ್ನು ದೆಹಲಿ ನಂತರ ಬೆಂಗಳೂರು, ಮುಂಬೈನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ನಂತರ, ಕೋಲ್ಕತ್ತಾದಲ್ಲಿ ಪಂದ್ಯವನ್ನು ಆಯೋಜಿಸಲಾಗುತ್ತಿತ್ತು.

ಈ ವಾರದ ಆರಂಭದಲ್ಲಿ ಮುಕ್ತಾಯವಾಗಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟೆಸ್ಟ್‌ ಪಂದ್ಯದ ಸಮಯದಲ್ಲಿ ಹೇಳಿಕೊಳ್ಳುವಷ್ಟು ಕ್ರಿಕೆಟ್ ಅಭಿಮಾನಿಗಳು ರಾಂಚಿ ಅಂಗಳಕ್ಕೆೆ ಹಾಜರಿರಲಿಲ್ಲ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ , ಇಂಗ್ಲೆೆಂಡ್ ಹಾಗೂ ಆಸ್ಟ್ರೇಲಿಯಾ ಮಾದರಿಯಲ್ಲೇ ತವರು ಸರಣಿಗಳಲ್ಲಿ ಕೇವಲ ಐದು ಕೇಂದ್ರಗಳಲ್ಲಿ ಮಾತ್ರ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದ್ದರು.

‘‘ವಿಶೇಷವಾಗಿ ಟೆಸ್‌ಟ್‌ ಕ್ರಿಕೆಟ್ ಅನ್ನೂ ಹೆಚ್ಚು ಪ್ರಚಾರ ಪಡೆಯಲು ದೇಶದಲ್ಲಿ ಐದು ಕೇಂದ್ರಗಳನ್ನು ಗುರುತಿಸುವುದು ಅತ್ಯಂತ ಮುಖ್ಯವಾಗಿದೆ. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ಸೇರಿ ಒಟ್ಟು ಐದು ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಈ ನಗರಗಳಲ್ಲಿ ಹೆಚ್ಚು ಜನ ಕ್ರಿಕೆಟ್ ನೋಡಲು ಹಾಜರಾಗುತ್ತಾರೆ. ಇದರಿಂದ ಟೆಸ್ಟ್‌ ಕ್ರಿಕೆಟ್‌ಗೆ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ಕುಂಬ್ಳೆೆ ಅರ್ಥೈಸಿದರು.

ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ವೇಳೆ ತವರು ನೆಲದ ಟೆಸ್ಟ್‌ ಸರಣಿಯಲ್ಲಿ ಐದು ವಿಭಿನ್ನ ಕೇಂದ್ರಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆ ಎಲ್ಲ ಕೇಂದ್ರಗಳು ನೂತನ ಕೇಂದ್ರಗಳಾಗಿದ್ದವು. ಇಂದೋರ್ ನಲ್ಲಿಯೂ ಒಂದು ಪಂದ್ಯ ಆಯೋಜಿಸಲಾಗಿತ್ತು. ಇಂದೋರ್ ನಲ್ಲಿ ಇದ್ದ ವಾತವಾರಣ ಅದ್ಭುತವಾಗಿತ್ತು. ನಗರದ ಹೃದಯ ಭಾಗದಲ್ಲಿ ಕ್ರೀಡಾಂಗಣ ಇರುವುದರಿಂದ ಭಾರಿ ಸಂಖ್ಯೆೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಅಂಗಳಕ್ಕೆೆ ಆಗಮಿಸಿದ್ದರು ಎಂದು ಹೇಳಿದರು.

ಹಗಲು-ರಾತ್ರಿ ಟೆಸ್ಟ್‌ ಬೇಕು:

ಹಗಲು ರಾತ್ರಿ ಟೆಸ್ಟ್‌ ಪಂದ್ಯ ಆಯೋಜನೆ ಮಾಡುವುದರಿಂದ ದಿನದ ಎರಡನೇ ಅವಧಿಗೆ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇದೆ. ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳನ್ನು ಸರಿಯಾದ ಅವಧಿಯಲ್ಲಿ ಆಯೋಜಿಸಬೇಕು. ಏಕೆಂದರೆ ಏಕದಿನ ಹಗಲು-ರಾತ್ರಿ ಪಂದ್ಯಗಳಲ್ಲಿ ಚೆಂಡು ಒದ್ದೆೆಯಾಗುತ್ತಿರುತ್ತದೆ. ಹಾಗಾಗಿ, ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳನ್ನು ನಿಗದಿತ ಅವಧಿಯಲೇ ಆಯೋಜಿಸಬೇಕು ಎಂದು ಅನಿಲ್ ಕುಂಬ್ಳೆೆ ಹೇಳಿದರು.


ವಿಶ್ವ ಕ್ರಿಕೆಟ್ ಮೇಲೆ ಕೊಹ್ಲಿಿ ಪಡೆಯ ಪ್ರಾಾಬಲ್ಯ:

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡು ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 240 ಅಂಕಗಳನ್ನು ಕಲೆ ಹಾಕಿರುವ ಭಾರತ ತಂಡ ಅಗ್ರ ಸ್ಥಾಾನ ಅಲಂಕರಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಇಡೀ ವಿಶ್ವ ಕ್ರಿಕೆಟ್ ಮೇಲೆ ಪ್ರಾಾಬಲ್ಯ ಮೆರೆಯಲಿದೆ ಎಂದು ನಾನು ಕೋಚ್ ಆಗಿದ್ದ ವೇಳೆ ಹೇಳಿದ್ದೆೆ ಹಾಗೂ ಈಗಲೂ ಅದೇ ಮಾತನ್ನು ಹೇಳುತ್ತೇನೆ. ಸದ್ಯ ಭಾರತ ತಂಡ ಅಂತಿಮ 11ರ ಜತೆಗೆ ಬೆಂಚ್ ಆಟಗಾರರು ಕೂಡ ಬಲಿಷ್ಟವಾಗಿದ್ದಾರೆ. ಅವರಿಗೆ ಅವಕಾಶ ನೀಡಿದರೆ ಸಾಕು ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com