ಕೊಹ್ಲಿ, ವಿಲಿಯಮ್ಸನ್ ಅವರ ಸ್ಪೂರ್ತಿ ಪಡೆಯುತ್ತೇನೆ: ಬಾಬರ್ ಅಜಮ್

ಪಾಕಿಸ್ತಾನ ಟಿ-20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಬಾಬರ್ ಅಜಮ್ , ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ, ಬಾಬರ್
ವಿರಾಟ್ ಕೊಹ್ಲಿ, ಬಾಬರ್

ಲಾಹೋರ್ : ಪಾಕಿಸ್ತಾನ ಟಿ-20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಬಾಬರ್ ಅಜಮ್ , ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೆ ಸರ್ಫರಾಜ್ ಅಹಮದ್ ಅವರನ್ನು ನಾಯಕತ್ವ ಸ್ಥಾನದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಜಾ ಮಾಡಿತ್ತು. ಅಲ್ಲದೇ, ಆಸ್ಟ್ರೇಲಿಯಾ ಸರಣಿಗೂ ಅವರನ್ನು ಕೈ ಬಿಡಲಾಗಿದೆ. ಇದೀಗ, ಪಾಕಿಸ್ತಾನ ತಂಡವನ್ನು ಬಾಬರ್ ಅಜಮ್ ಮುನ್ನಡೆಸಲಿದ್ದಾರೆ.

ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧದ ಟಿ-20 ಸರಣಿಗೆ ತಂಡವನ್ನು ಮುನ್ನಡೆಸುವ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಪ್ರಸ್ತುತ ತಲೆಮಾರಿನ ಯಶಸ್ವಿ ನಾಯಕರಾದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಪ್ರೇರಣೆಯೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಸವಾಲು ಪೂರ್ಣಗೊಳಿಸುತ್ತೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಕಳೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಉಪನಾಯಕನಾಗಿ ಬಾಬರ್ ಅಜಮ್ 13, 3 ಹಾಗೂ 27 ರನ್ ಗಳಿಗೆ ಸೀಮಿತರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ ಜನರು ನಾನು ಉಪನಾಯಕನಾಗಿದ್ದರಿಂದ ಲಂಕಾ ವಿರುದ್ಧ ವೈಫಲ್ಯ ಅನುಭವಿಸಿದರು ಎಂದು ಅವರಿಗೆ ಬೇಕಾದ ರೀತಿಯಲ್ಲಿ ಮಾತನಾಡಬಹುದು.

'ಕ್ರಿಕೆಟ್ ಎಂಬುದು ಒಂದು ಕ್ರೀಡೆ. ಕ್ರೀಡೆ ಎಂದ ಮೇಲೆ ಏರಿಳಿತಗಳು ಇದ್ದೇ ಇರುತ್ತದೆ. ಶ್ರೀಲಂಕಾ ವಿರುದ್ಧದ ಪ್ರತಿಯೊಂದು ಪಂದ್ಯಕ್ಕೂ ನಾನು ಶೇ. 120 ರಷ್ಟು ಪ್ರಯತ್ನ ನಡೆಸಿದ್ದೆ. ಆದರೆ, ನಮ್ಮ ಪಾಲಿಗೆ ಲಂಕಾ ಸರಣಿ ಕಳಪೆಯಾಗಿತ್ತು. ನಾಯಕನಾಗಿ ನನ್ನ ಪ್ರದರ್ಶನದ ಮೇಲೂ ಹೆಚ್ಚಿನ ಒತ್ತಡ ಬೀಳಬಹುದು ಎಂದು ನಾನು ಗಮನಿಸುವುದಿಲ್ಲ. ಎಂದಿನಂತೆ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವತ್ತ ಗಮನ ಹರಿಸುತ್ತೇನೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com