ಗಂಗೂಲಿ ಬಿಸಿಸಿಐ, ದ್ರಾವಿಡ್ ಎನ್ ಸಿಎ ಚೀಫ್: ಉತ್ತಮ ಹಾದಿಯಲ್ಲಿ ಭಾರತೀಯ ಕ್ರಿಕೆಟ್ - ರವಿಶಾಸ್ತ್ರಿ

ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ನೇಮಕವಾಗಿರುವುದರಿಂದ ಭಾರತೀಯ ಕ್ರಿಕೆಟ್ ಸರಿಯಾದ ಹಾದಿಯಲ್ಲಿ ಸಾಗಲಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಅಭಿಪ್ರಾಯಪಟ್ಟಿದ್ದಾರೆ.
ರವಿಶಾಸ್ತ್ರಿ
ರವಿಶಾಸ್ತ್ರಿ

ಮುಂಬೈ:  ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ನೇಮಕವಾಗಿರುವುದರಿಂದ ಭಾರತೀಯ ಕ್ರಿಕೆಟ್ ಸರಿಯಾದ ಹಾದಿಯಲ್ಲಿ ಸಾಗಲಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ನೂತನ ಅಧ್ಯಕ್ಷರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿರುವ ರವಿಶಾಸ್ತ್ರೀ, ಅವರು ಯಾವಾಗಲೂ ಸ್ವಾಭಾವಿಕ ನಾಯಕರಾಗಿದ್ದಾರೆ. ಬಿಸಿಸಿಐ ತನ್ನ ಗತಕಾಲಕ್ಕೆ ಮರಳುವ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಬೇಕಾಗಿದೆ. ಅವರಿಗೆ ಒಳ್ಳೇಯದಾಗಲಿ ಎಂದು ಆಶಿಸುವುದಾಗಿ ರವಿಶಾಸ್ತ್ರೀ ಹೇಳಿದ್ದಾರೆ.

ಎಂ.ಎಸ್. ಧೋನಿ ಭವಿಷ್ಯದಲ್ಲಿ ಸ್ಪಷ್ಟ ಚಿತ್ರಣ ದೊರೆಯುತ್ತಿಲ್ಲ ಎನ್ನುವವರ ವಿರುದ್ಧ ವಾಗ್ದಾಳಿ ನಡೆಸಿದ ರವಿಶಾಸ್ತ್ರಿ, ಬೇಕೆನಿಸಿದಾಗ ಧೋನಿ ಅವರೇ ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂದರು. 

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಿಸಿಸಿಐನ ಪ್ರಮುಖ ಸಂಸ್ಥೆಯಾಗಿದ್ದು, ರಾಹುಲ್ ದ್ರಾವಿಡ್ ಅದರ ಮುಖ್ಯಸ್ಥರಾಗಿರುವುದರಿಂದ ಉತ್ತಮವಾದುದ್ದನ್ನು ನಿರೀಸುತ್ತಿದ್ದೇವೆ. ಸೌರವ್ ಗಂಗೂಲಿ ಬಿಸಿಸಿಐ , ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವುದರಿಂದ ಭಾರತೀಯ ಕ್ರಿಕೆಟ್ ಉತ್ತಮ ಕಾಂಬಿನೇಷನ್ ದೊರೆತಂತಾಗಿದೆ ಎಂದು ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com