ವಿದೇಶಿ ನೆಲಗಳಲ್ಲಿ ಟಾಸ್ ಗೆ ತೆರಳಲ್ಲ; ಡುಪ್ಲೆಸಿಸ್ ನಿರ್ಧಾರಕ್ಕೆ ಕ್ರಿಕೆಟ್ ಅಭಿಮಾನಿಗಳ ಕಿಡಿ

ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲುಕಂಡಿರುವ ಆಫ್ರಿಕಾ ತಂಡದ ನಾಯಕ ತಮ್ಮ ಸೋಲಿಗೆ ಟಾಸ್ ಕಾರಣ ಎಂದು ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೇಪ್ ಟೌನ್: ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲುಕಂಡಿರುವ ಆಫ್ರಿಕಾ ತಂಡದ ನಾಯಕ ತಮ್ಮ ಸೋಲಿಗೆ ಟಾಸ್ ಕಾರಣ ಎಂದು ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.

ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಹೀನಾಯವಾಗಿ ಸೋತು ಸ್ವದೇಶ ಆಫ್ರಿಕಾಗೆ ತೆರಳಿದ ಬಳಿಕ ಅಲ್ಲಿ ತಮ್ಮ ರಾಗ ಬದಲಿಸಿದ್ದು, ತಮ್ಮ ತಂಡದ ಹೀನಾಯ ಸೋಲಿಗೆ ಟಾಸ್ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ಇನ್ನು ಮುಂದೆ ವಿದೇಶಗಳಲ್ಲಿ ನಡೆಯುವ ಸರಣಿಗಳ ಟಾಸ್ ಗೆ ಹೋಗುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಆಫ್ರಿಕಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಫಾಫ್ ಡುಪ್ಲೆಸಿಸ್, 'ಇನ್ನೂ ಮಂದೆ ಹೊರ ದೇಶಗಳಲ್ಲಿ ನಡೆಯುವ ಪಂದ್ಯಗಳಲ್ಲಿ ಟಾಸ್ ಗೆ ತೆರಳವುದಿಲ್ಲ. ಭಾರತದಲ್ಲಿ ನಮಗೆ ಕಹಿ ಅನುಭವವಾಗಿದ್ದು, ಟೆಸ್ಟ್ ಸರಣಿಯ ಪ್ರತಿಯೊಂದು ಪಂದ್ಯದಲ್ಲಿ ಭಾರತ ತಂಡವೇ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 500 ಕ್ಕೂ ಹೆಚ್ಚು ರನ್ ಗಳಿಸುತ್ತಿತ್ತು. ನಂತರ, ಮಂಧ ಬೆಳಕಿನಿಂದ ಡಿಕ್ಲೇರ್ ಮಾಡಿಕೊಂಡು ನಮ್ಮ ತಂಡದ ಮೂರು ವಿಕೆಟ್ ಕಬಳಿಸುತ್ತಿತ್ತು. ನಂತರ ಮೂರನೇ ದಿನ ಆರಂಭದಲ್ಲಿ ನಾವು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಡುಪ್ಲೆಸಿಸ್ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಕಿಡಿಕಾರುತ್ತಿದ್ದು, ಸೋಲನ್ನು ಸ್ವೀಕರಿಸಿದ ನಾಯಕನಿಂದ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ. ಡುಪ್ಲೆಸಿಸ್‌ಗೆ ತಿರುಗೇಟು ನೀಡಲು ಮನಸ್ಸಾಗುತ್ತಿದೆ. ಆದರೆ ನಾನು ಸಿಎಸ್‌ಕೆ ಅಭಿಮಾನಿ ಹೀಗಾಗಿ ಸುಮ್ಮನಿದ್ದೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com