2 ನಿಷೇಧಿತ ಶಕಿಬ್ ಅಲ್ ಹಸನ್-ಭಾರತೀಯ ಬುಕ್ಕಿ ನಡುವಿನ ಸಂಭಾಷಣೆ ಇಲ್ಲಿದೆ ನೋಡಿ!

ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಬುಕೀಗಳು ಸಂಪರ್ಕಿಸಿದ್ದ ವಿಚಾರವನ್ನು ಐಸಿಸಿ ಗಮನಕ್ಕೆ ತರದೆ ಭ್ರಷ್ಟಾಚಾರ ತಡೆ ನಿಯಮವನ್ನು ಉಲ್ಲಂಘಿಸಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌, ಇದೀಗ ಎಲ್ಲಾ...
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್

ದುಬೈ: ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಬುಕೀಗಳು ಸಂಪರ್ಕಿಸಿದ್ದ ವಿಚಾರವನ್ನು ಐಸಿಸಿ ಗಮನಕ್ಕೆ ತರದೆ ಭ್ರಷ್ಟಾಚಾರ ತಡೆ ನಿಯಮವನ್ನು ಉಲ್ಲಂಘಿಸಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌, ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 2 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಶಕಿಬ್ ಅಲ್ ಹಸನ್ ಹಾಗೂ ಬುಕಿ ನಡುವಿನ ಸಂಭಾಷಣೆಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಬುಕ್ಕಿಯನ್ನು ಭಾರತ ಮೂಲದ ದೀಪಕ್ ಅಗರ್ವಾಲ್ ಎಂದು ಗುರುತಿಸಲಾಗಿದೆ.

ವರ್ಷದ ಸ್ಟಾರ್‌ ಆಲ್‌ರೌಂಡರ್‌ ಶಕಿಬ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ವಿರುದ್ಧದ ಶಿಕ್ಷೆಗೂ ಸಮ್ಮತಿಸಿದ್ದಾರೆ. ಇದರೊಂದಿಗೆ 2020ರ ಅಕ್ಟೋಬರ್‌ 29ರವರೆಗೆ ನಿಷೇಧ ಜಾರಿಯಿರಲಿದೆ. ಈ ಮಧ್ಯೆ ಐಸಿಸಿ ಭ್ರಷ್ಟಾಚಾರ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳುವಲ್ಲಿ ಶಕಿಬ್‌ ವಿಫಲರಾದರೆ ಹೆಚ್ಚುವರಿ 12 ತಿಂಗಳ ಅಮಾನತು ಶಿಕ್ಷೆ ಸೇರ್ಪಡೆಯಾಗಲಿದ್ದು, ಒಟ್ಟು 2 ವರ್ಷ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವಂತಾಗುತ್ತದೆ. 12 ತಿಂಗಳ ಶಿಕ್ಷೆ ತಪ್ಪಿಸಿಕೊಳ್ಳುವುದು ಇದೀಗ ಶಕಿಬ್‌ ಕೈಲಿದೆ.

ಮೊದಲಿಗೆ 12 ತಿಂಗಳ ನಿಷೇಧ ಅವಧಿಯಲ್ಲಿ ಶಕಿಬ್‌ ವರ್ಷ ಅಕ್ಟೋಬರ್‌ 8ರಿಂದ ನವೆಂಬರ್‌ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌, ಅದಕ್ಕೂ ಮುನ್ನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಳಿಂದ ಹೊರಗುಳಿಯುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com