ಆಯ್ಕೆದಾರರು ಅನುಷ್ಕಾಗೆ ಟೀ ಸರ್ವ್ ಮಾಡ್ತಾರಾ? ಮಾಜಿ ಕ್ರಿಕೆಟಿಗ ಅಸಮಾಧಾನ, ಮೌನ ಮುರಿದ ಬಾಲಿವುಡ್ ಬೆಡಗಿ

ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡುವುದನ್ನು ನೋಡಿದ್ದಾಗಿ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.

Published: 31st October 2019 07:16 PM  |   Last Updated: 31st October 2019 07:24 PM   |  A+A-


VirushkaFarokh1

ವಿರೂಷ್ಕಾ ದಂಪತಿ, ಫಾರೂಖ್ ಎಂಜಿನಿಯರ್

Posted By : Nagaraja AB
Source : Online Desk

ಮುಂಬೈ:  ಇಂಗ್ಲೆಂಡ್ ನಲ್ಲಿ  ಇತ್ತೀಚಿಗೆ ನಡೆದ 2019  ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಆಯ್ಕೆದಾರರು ಟೀ ಸರ್ವ್ ಮಾಡುವುದನ್ನು ನೋಡಿದ್ದಾಗಿ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.

ಎಂಎಸ್ ಕೆ ಪ್ರಸಾದ್ ನೇತೃತ್ವದಲ್ಲಿನ ಕ್ರಿಕೆಟ್ ಆಯ್ಕೆದಾರರ ಸಮಿತಿ ಬಗ್ಗೆ 82 ವರ್ಷದ ಫಾರೂಖ್ ಎಂಜಿನಿಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಯಾವುದೇ ಸೂಕ್ತ  ಅರ್ಹತೆ ಹೊಂದಿಲ್ಲದ  ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿ ಎಂದು ಕರೆದಿದ್ದಾರೆ.

ಮಿಕ್ಕಿ ಮೌಸ್ ಸೆಲೆಕ್ಷನ್ ಕಮಿಟಿಯನ್ನು ನಾವು ಪಡೆದಿದ್ದೇವೆ. ವಿರಾಟ್ ಕೊಹ್ಲಿ ಪರಿಣಾಮಕಾರಿ ಪ್ರಭಾವ ಬೀರುವುದು ಒಳ್ಳೇಯದು ಆದರೆ, ಆಯ್ಕೆದಾರರು ಹೇಗೆ ಅರ್ಹರು? ಅವರು 10-12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯ ವೇಳೆಯಲ್ಲಿ ಆಯ್ಕೆದಾರನೊಬ್ಬನನ್ನು ನಾನು ನೋಡಿಯೇ ಇರಲಿಲ್ಲ. ಭಾರತದ ಬ್ಲೇಜರ್ ಧರಿಸಿದ್ದರಿಂದ ಆತನನ್ನು ಕೇಳಿದಾಗ ಆಯ್ಕೆದಾರರು ಅಂತಾ ಹೇಳಿದ. ಇವೆರಲ್ಲರೂ  ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟೀ ಸರ್ವ್ ಮಾಡುತ್ತಿದ್ದರು ಎಂದು ಎಂಜಿನಿಯರ್ ಇತ್ತೀಚಿಗೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಆದಾಗ್ಯೂ, ಅನುಷ್ಕಾ ಶರ್ಮಾ, ಫಾರೂಖ್ ಎಂಜಿನಿಯರ್ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ವಿಶ್ವಕಪ್ ಪಂದ್ಯಾವಳಿ ವೇಳೆ ಕೇವಲ ಒಂದು ಪಂದ್ಯಕ್ಕೆ ಮಾತ್ರ ಇಂಗ್ಲೆಂಡ್ ಗೆ ಹೋಗಿದ್ದು, ಪ್ಯಾಮಿಲಿ ಬಾಕ್ಸ್ ನಲ್ಲಿ  ಕುಳಿತು ಪಂದ್ಯ ವೀಕ್ಷಿಸಿದ್ದೇನೆ, ಆಯ್ಕೆದಾರರ ಬಾಕ್ಸ್ ನಲ್ಲಿ ಕುಳಿತಿರಲಿಲ್ಲ. ಆದರೆ, ದುರುದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನನ್ನ ಮೇಲಿನ ಸುಳ್ಳು ಸುದ್ದಿ ಹಾಗೂ ವರದಿಗಳ  ವಿರುದ್ಧ ಯಾವಾಗಲೂ ಮೌನ ವಹಿಸುತ್ತೇನೆ. 11 ವರ್ಷಗಳಿಂದಲೂ ಗೌರವಯುತವಾಗಿ ವೃತ್ತಿ ಜೀವನ ನಡೆಸುತ್ತಿದ್ದೇನೆ. ಇಂತಹ ಮಾತುಕತೆಗಳ ಸಂದರ್ಭದಲ್ಲಿ ನನ್ನ ಹೆಸರನ್ನು ಬಳಸಿಕೊಳ್ಳಬೇಡಿ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

 

Stay up to date on all the latest ಕ್ರಿಕೆಟ್ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp