ಐಸಿಸಿ ಟೆಸ್ಟ್‌ ಕ್ರಿಕೆಟ್‌ ಪದಾರ್ಪಣೆ ಹೊಸ್ತಿಲಲ್ಲಿ ಅಂಪೈರ್‌ ಭಾರತದ ನಿತಿನ್ ಮೆನನ್‌

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ಓವರ್‌ಗಳ ಮಾದರಿಯಲ್ಲಿ ಈಗಾಗಲೇ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಭಾರತದ ನಿತಿನ್‌ ಮೆನನ್‌ ಅವರು ಇದೀಗ ಟೆಸ್ಟ್‌ ಕ್ರಿಕೆಟ್‌ಗೂ ಪದಾರ್ಪಣೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.
ನಿತೀನ್ ಮೆನನ್
ನಿತೀನ್ ಮೆನನ್

ನವದೆಹಲಿ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ಓವರ್‌ಗಳ ಮಾದರಿಯಲ್ಲಿ ಈಗಾಗಲೇ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಭಾರತದ ನಿತಿನ್‌ ಮೆನನ್‌ ಅವರು ಇದೀಗ ಟೆಸ್ಟ್‌ ಕ್ರಿಕೆಟ್‌ಗೂ ಪದಾರ್ಪಣೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.

ಮುಂದಿನ ನವೆಂಬರ್‌ 27 ರಂದು ಅಫ್ಘಾನಿಸ್ತಾನ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೈದಾನದ ತೀರ್ಪುಗಾರರಾಗಿ ನಿತಿನ್‌ ಮೆನನ್‌ ಮೈದಾನಕ್ಕೆ ಇಳಿಯಲಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ತೀರ್ಪುಗಾರ ನರೇಂದ್ರ ಮೆನನ್‌ ಅವರ ಪುತ್ರ ನಿತಿನ್‌ ಮೆನನ್‌. ತಮ್ಮ ತಂದೆಯ ಹಾದಿಯಲ್ಲಿ 2005ರಲ್ಲೇ ನಿತಿನ್‌ ಮೆನನ್‌ ಅವರು ಮಧ್ಯೆ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ಗೆ ರಾಜ್ಯದ ಪ್ಯಾನಲ್‌ ತೀರ್ಪುಗಾರರಾಗಿ ಸೇವೆ ಆರಂಭಿಸಿದ್ದರು.

16 ವಯೋಮಿತಿ, 19 ವಯೋಮಿತಿ, 23 ವಯೋಮಿತಿ ಹಾಗೂ ಲಿಸ್ಟ್‌ ಎ ಪಂದ್ಯಗಳಲ್ಲಿ ನಿತಿನ್‌ ಅವರು ಮಧ್ಯಪ್ರದೇಶದ ಪ್ರತಿನಿಧಿಸಿದ್ದಾರೆ. 2006ರಲ್ಲಿ ಬಿಸಿಸಿಐ ಆಯೋಜಿಸಿದ್ದ ಅಖಿಲ ಭಾರತ ಅಂಪೈರ್‌ ಪರೀಕ್ಷೆಯಲ್ಲಿ ನಿತಿನ್‌ ಮೆನನ್‌ ಅವರು ಪಾಸಾಗಿದ್ದರು. 2007-08ರ ಆವೃತ್ತಿಯಲ್ಲೇ ಅವರು ದೇಶೀಯ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಸೇವೆ ಆರಂಭಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com