2ನೇ ಟೆಸ್ಟ್ : ಭೋಜನ ವಿರಾಮದ ಹೊತ್ತಿಗೆ ವೆಸ್ಟ್ ಇಂಡೀಸ್ ವೆಸ್ಟ್ ಇಂಡೀಸ್  4 ವಿಕೆಟ್ ನಷ್ಟಕ್ಕೆ 145 ರನ್ 

 ಟೀಮ್ ಇಂಡಿಯಾ ನೀಡಿರುವ  468 ರನ್‌ಗಳ ಬೃಹತ್ ಗೆಲುವಿನ ಗುರಿ  ಬೆನ್ನತ್ತಿರುವ ಆತಿಥೇಯ ವೆಸ್ಟ್‌ಇಂಡೀಸ್, ಇಲ್ಲಿ ನಡೆಯುತ್ತಿರುವ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 40 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ.

Published: 03rd September 2019 12:06 AM  |   Last Updated: 03rd September 2019 12:06 AM   |  A+A-


TeamIndia

ಟೀಂ ಇಂಡಿಯಾ

Posted By : Nagaraja AB
Source : The New Indian Express

ಕಿಂಗ್ ಸ್ಟನ್ :  ಟೀಮ್ ಇಂಡಿಯಾ ನೀಡಿರುವ  468 ರನ್‌ಗಳ ಬೃಹತ್ ಗೆಲುವಿನ ಗುರಿ  ಬೆನ್ನತ್ತಿರುವ ಆತಿಥೇಯ ವೆಸ್ಟ್‌ಇಂಡೀಸ್, ಇಲ್ಲಿ ನಡೆಯುತ್ತಿರುವ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 40 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾ ಮತ್ತೊಂದು ಕ್ಲೀನ್ ಸ್ವೀಪ್ ನತ್ತ ದಾಪುಗಾಲು ಹಾಕಿದೆ. 

ವೆಸ್ಟ್ ಇಂಡೀಸ್ ಗೆಲ್ಲಲು ಆರು ವಿಕೆಟ್ ಗಳಲ್ಲಿ 323 ರನ್ ಗಳಿಸಬೇಕಾಗಿದೆ. ದಿನದಾಟ ಮುಂದುವರಿಸಿದ ವಿಂಡೀಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಅನಾರೋಗ್ಯಕ್ಕೆ ಒಳಗಾದ ಬ್ರಾವೋ (23) ನಿವೃತ್ತಿಯನ್ನು ಹೊಂದಿದರು. ಬ್ರಾವೋ ಸ್ಥಾನಕ್ಕೆ ಜರ್ಮೈನ್ ಬ್ಲ್ಯಾಕ್‌ವುಡ್ ಬದಲಿ ಆಟಗಾರನಾಗಿ ಸೇರಿಕೊಂಡರು. 

ಈ ಹಂತದಲ್ಲಿ ಜತೆಗೂಡಿದ ಶಮರ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ (12) ಅಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಈ ಜೋಡಿಯನ್ನು ರವೀಂದ್ರ ಜಡೇಜಾ ಹೊರದಬ್ಬಿದರು. ಬೆನ್ನಲ್ಲೇ ಶಿಮ್ರಾ ಹೆಟ್ಮಾಯೆರ್ (1) ಓಟಕ್ಕೆ ಇಶಾಂತ್ ಶರ್ಮಾ ಬ್ರೇಕ್ ಹಾಕಿದರು. ಇದೀಗ ಕ್ರೀಸಿನಲ್ಲಿರುವ ಶಮರ್ ಬ್ರೂಕ್ಸ್ (36 ) ಹಾಗೂ ಜರ್ಮೈನ್ ಬ್ಲ್ಯಾಕ್‌ವುಡ್ (33) ಭಾರತದ ಗೆಲುವನ್ನು ವಿಳಂಬ ಮಾಡುವ ಪ್ರಯತ್ನದಲ್ಲಿದ್ದಾರೆ. 

 ಭಾರತದ ಪರ ಇಶಾಂತ್ ಶರ್ಮಾ   28 ರನ್ ಗಳಿಗೆ 2 ವಿಕೆಟ್ ಗಳನ್ನು ಪಡೆದರೆ  ರವೀಂದ್ರ ಜಡೇಜಾ 33 ರನ್ ಗಳಿಗೆ 1 ವಿಕೆಟ್ ಪಡೆದುಕೊಂಡರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp