ಕ್ಯಾಚ್ ಹಿಡಿಯಲು ಹೋಗಿ ಮುಖಾಮುಖಿ ಡಿಕ್ಕಿ, ಜೀವಕ್ಕೆ ಕುತ್ತು ತಂದುಕೊಂಡ್ರಾ? ವಿಡಿಯೋ ವೈರಲ್!

ತಂಡವನ್ನು ಗೆಲ್ಲಿಸಬೇಕು ಎಂಬ ಉತ್ಸಾಹದಲ್ಲಿದ್ದ ಇಬ್ಬರು ಆಟಗಾರರು ಬೌಂಡರಿಯಲ್ಲಿ ಕ್ಯಾಚ್ ಹಿಡಿಯುವ ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಅದ್ಭುತ ಕ್ಯಾಚ್ ಹಿಡಿದರು ಡಿಕ್ಕಿಯಿಂದಾಗಿ ಫೀಲ್ಡರ್ ಪ್ರಜ್ಞೆ ತಪ್ಪಿ ಬೌಂಡರಿ ಗೆರೆಯನ್ನು ಮುಟ್ಟಿದ್ದಾನೆ. ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Published: 04th September 2019 12:27 PM  |   Last Updated: 04th September 2019 12:31 PM   |  A+A-


Sri Lanka players

ಶ್ರೀಲಂಕಾ ಆಟಗಾರರು

Posted By : Vishwanath S
Source : Online Desk

ಪಲ್ಲೇಕೇಲೆ: ತಂಡವನ್ನು ಗೆಲ್ಲಿಸಬೇಕು ಎಂಬ ಉತ್ಸಾಹದಲ್ಲಿದ್ದ ಇಬ್ಬರು ಆಟಗಾರರು ಬೌಂಡರಿಯಲ್ಲಿ ಕ್ಯಾಚ್ ಹಿಡಿಯುವ ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಅದ್ಭುತ ಕ್ಯಾಚ್ ಹಿಡಿದರು ಡಿಕ್ಕಿಯಿಂದಾಗಿ ಫೀಲ್ಡರ್ ಪ್ರಜ್ಞೆ ತಪ್ಪಿ ಬೌಂಡರಿ ಗೆರೆಯನ್ನು ಮುಟ್ಟಿದ್ದಾನೆ. ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಶ್ರೀಲಂಕಾದ ಪಿಲ್ಲೇಕೆಲ್ಲೆ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವೆ ಟಿ20 ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 

162 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಕೊನೆಯ ಓವರ್ ನಲ್ಲಿ 7 ರನ್ ಬೇಕಿತ್ತು. ಈ ವೇಳೆ ಮಾರಕ ಬೌಲಿಂಗ್ ದಾಳಿ ಮಾಡಿದ್ದ ಡಿ ಸಿಲ್ವಾ ಮೊದಲ ಎರಡು ಎಸೆತಗಳಲ್ಲಿ ವಿಕೆಟ್ ಪಡೆದಿದ್ದರು. ಇನ್ನು ಮೂರನೇ ಎಸೆತದಲ್ಲಿ ಸ್ಯಾಂಟ್ನರ್ ಬಿರುಸಿನಿಂದ ಹೊಡೆದರು ಚೆಂಡು ಸಿಕ್ಸರ್ ಬೌಂಡರಿಯತ್ತ ಹೋಗುತ್ತಿದ್ದಾಗ ಜಯಸೂರಿಯಾ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದರು. ಆದರೆ ಮೆಂಡಿಸ್ ಡಿಕ್ಕಿಯಾಗಿದ್ದರಿಂದ ಅವರು ಬೌಂಡರಿ ಗೆರೆ ಮುಟ್ಟಿದ್ದರಿಂದ ಅಂಪೈರ್ ಸಿಕ್ಸರ್ ಎಂದು ಘೋಷಿಸಿದರು. ಇನ್ನು ನಾಲ್ಕನೇ ಎಸೆತದಲ್ಲಿ ಸ್ಯಾಂಟ್ನರ್ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಆದರೆ ಈ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ತಂಡದ ವೈದ್ಯರು ಪರೀಕ್ಷಿಸಿದರು. ಚಿಕಿತ್ಸೆ ನಂತರ ಇಬ್ಬರು ಆಟಗಾರರು ಚೇತರಿಸಿಕೊಂಡರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp