ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿದ ಬಾಲಕ, ಈತ ಯಾರು? ಈ ವಿಡಿಯೋ ನೋಡಿ!

7 ವರ್ಷದ ಬಾಲಕನೊಬ್ಬ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿ ಅಚ್ಚರಿ ಮೂಡಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published: 04th September 2019 05:11 PM  |   Last Updated: 04th September 2019 05:11 PM   |  A+A-


Kohli-Anushka-Boy

ವಿರಾಟ್-ಕೊಹ್ಲಿ-ಅನುಷ್ಕಾ-ಬಾಲಕ

Posted By : Vishwanath S
Source : Online Desk

ಜಮೈಕಾ: 7 ವರ್ಷದ ಬಾಲಕನೊಬ್ಬ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡಿ ಅಚ್ಚರಿ ಮೂಡಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ವಿರಾಟ್ ಕೊಹ್ಲಿಯ ಆಟೋಗ್ರಾಫ್ ಪಡೆದುಕೊಳ್ಳಲು. ಅಂತಹದರಲ್ಲಿ ಈ ಪುಟ್ಟ ಬಾಲಕ ತಾನೇ ಆಟೋಗ್ರಾಫ್ ನೀಡಿದ್ದಾನೆ. ಇದನ್ನು ಕಂಡ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ದಾಖಲಿಸಿದ ಬಳಿಕ ಜಮೈಕಾದಿಂದ ಸ್ವದೇಶಕ್ಕೆ ಬರುವಾಗ ಈ ಘಟನೆ ನಡೆದಿದೆ. ಕೊಹ್ಲಿಯ ಆಟೋಗ್ರಾಫ್ ಪಡೆದುಕೊಳ್ಳಲು ಮಕ್ಕಳು ಪೆನ್ನು, ಪೇಪರ್ ಹಿಡಿದು ಬಂದಿದ್ದರು. ಆಗ 7 ವರ್ಷದ ಬಾಲಕ ತಾನೇ ಸಹಿ ಮಾಡಿದ ಪೇಪರ್ ಅನ್ನು ಕೊಹ್ಲಿಯ ಕೈಗೆ ಕೊಟ್ಟಿದ್ದಾನೆ. 

ಇನ್ನು ಇದನ್ನು ಬಾಲಕನ ಮಾವ ಅಮಿತ್ ಲಖಾನಿ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp