ಆಶಸ್ 2019 ಸಚಿನ್ ದಾಖಲೆ ಮುರಿದು ಮುನ್ನುಗ್ಗಿದ ಸ್ಟೀವ್ ಸ್ಮಿತ್, 26ನೇ ಟೆಸ್ಟ್ ಶತಕ ಸಾಧನೆ

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ವಿರುದ್ಧದ 26 ನೇ ಟೆಸ್ಟ್ ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್

ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡ್ ವಿರುದ್ಧದ 26 ನೇ ಟೆಸ್ಟ್ ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.

2019ರ ಸಾಲಿನಲ್ಲಿ ಉತ್ತಮ ಫಾರ್ಮ್ ತೋರುತ್ತಿರುವ ಸ್ಮಿತ್ ಕೇವಲ 121 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 26 ಶತಕ ಸಿಡಿಸಿ ಅರಿವೇಗವಾಗಿ 26ನೇ ಶತಕ ಪೂರೈಸಿದ ವಿಶ್ವದ ಎರಡನೇ ಆಟಗಾರನೆಂಬ ಖ್ಯಾತಿಗೆ ಭಾಜನರಾಗಿದ್ದಾರೆ.ಇದುವರೆಗೆ ಡಾನ್ ಬ್ರ್ಯಾಡ್ ಮನ್,(69 ) ಸಚಿನ್ ತೆಂದೂಲ್ಕರ್ (136 )  ಅವರ ಹೆಸರಲ್ಲಿದ್ದ ಈ ದಾಖಲೆಯನ್ನು ಸ್ಮಿತ್ ತನ್ನದಾಗಿಸಿಕೊಂಡು ಸಚಿನ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.

ಇನ್ನು ಸ್ಟೀವ್ ಸ್ಮಿತ್, ಸಚಿನ್ ಬಳಿಕ ಸುನಿಲ್ ಗವಾಸ್ಕರ್ (144 )  ಮ್ಯಾಥ್ಯೂ ಹೇಡನ್ (145 ) ಅವರುಗಳು ಈ ಸಾಧನೆ ಮಾಡಿದವರ ಪಟ್ಟಿಯಲ್ಲಿದ್ದಾರೆ.

ಆಷಸ್ ಸರಣಿಯ ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 144 ಹಾಗೂ 142 ರನ್ ಗಳಿಸಿದ್ದ ಸ್ಮಿತ್ ಎರಡನೇ ಟೆಸ್ಟ್ ವೇಳೆ ಗಾಯಗೊಂಡ ಕಾರಣ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ನಾಲಕ್ನೇ ಟೆಸ್ಟ್ ನಲ್ಲಿ ಅವರು 211 ರನ್ ಸಿಡಿಸಿ ಅಮೇಘ ಪ್ರದರ್ಶನ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com