ಸ್ಮಿತ್‌- ವಿರಾಟ್ ಕೊಹ್ಲಿ ಬಗ್ಗೆ ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಹೇಳಿದ್ದೇನು ?

ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಸ್ಟೀವನ್‌ ಸ್ಮಿತ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ...

Published: 06th September 2019 01:34 PM  |   Last Updated: 06th September 2019 01:34 PM   |  A+A-


Shane Warne

ಶೇನ್ ವಾರ್ನ್

Posted By : Shilpa D
Source : UNI

ನವದೆಹಲಿ: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಸ್ಟೀವನ್‌ ಸ್ಮಿತ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. 

ಇದೀಗ ನಡೆಯುತ್ತಿರುವ ಆ್ಯಶಸ್‌ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಂದ ಸ್ಮಿತ್‌ ಒಂದು ದ್ವಿಶತಕ, ಮೂರು ಶತಕ ಹಾಗೂ 89 ರನ್‌ ಗಳಿಸಿದ್ದಾರೆ. 147.25 ಸರಾಸರಿಯಲ್ಲಿ ರನ್‌ ಹೊಳೆ ಹರಿಸಿದ್ದಾರೆ.

ಈ ಬಗ್ಗೆ ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಪ್ರತಿಕ್ರಿಯಿಸಿ "ಟೆಸ್ಟ್‌ ಕ್ರಿಕೆಟ್‌ಗೆ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಸ್ಥಾನ ಪಡೆದುಕೊಳ್ಳಲಿದ್ದಾರೆ. ಏಕೆಂದರೆ, 100 ಶತಕ ಸಿಡಿಸಿರುವ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆ ಮುರಿಯುವ ಸನಿಹದಲ್ಲಿ ಕೊಹ್ಲಿ ಇದ್ದಾರೆ" ಎಂದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ವೀವನ್‌ ಸ್ಮಿತ್‌ ಹಾಗೂ ವಿರಾಟ್‌ ಕೊಹ್ಲಿ ಅವರಲ್ಲಿ ಉತ್ತಮ ಬ್ಯಾಟ್ಸ್‌ಮನ್‌ ಯಾರು ಎಂದು ಹೇಳುವುದು ಕಷ್ಟ. ಆದರೆ, ಸ್ಟೀವನ್‌ ಸ್ಮಿತ್‌ ಅವರನ್ನು ಟೆಸ್ಟ್‌ಗೆ ಉತ್ತಮ ಬ್ಯಾಟ್ಸ್‌ಮನ್‌ ಎಂದು ಹೇಳಬಹುದು. ವಿರಾಟ್‌ ಕೊಹ್ಲಿ ಅವರನ್ನು ಎಲ್ಲ ಮಾದರಿಯಲ್ಲಿ ವಿಶ್ವದ ಅತ್ಯಂತ ಅದ್ಭುತ ಬ್ಯಾಟ್ಸ್‌ಮನ್‌. ಕೊಹ್ಲಿ ಒಬ್ಬ ದಂತಕತೆ ಎಂದು ಶೇನ್‌ವಾರ್ನ್‌ ಶ್ಲಾಘಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp