ಧೋನಿ-ಕೊಹ್ಲಿಯಷ್ಟು ಸಿರಿವಂತನಲ್ಲದಿದ್ದರೂ ಮೈದಾನದ ಸಿಬ್ಬಂದಿಗಳಿಗೆ ಸಂಭಾವನೆ ದಾನ ಮಾಡಿದ ಕ್ರಿಕೆಟಿಗ!

ಜಗತ್ತಿನ ಶ್ರೀಮಂತ ಕ್ರಿಕೆಟಿಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೀಮಂತ ಕ್ರಿಕೆಟಿಗ ಎಂಎಸ್ ಧೋನಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲೊಬ್ಬ ಆಟಗಾರ ತನಗೆ ನೀಡುವ ಪಂದ್ಯದ ಸಂಭಾವನೆಯನ್ನೇ ಮೈದಾನದ ಸಿಬ್ಬಂದಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Published: 08th September 2019 12:14 PM  |   Last Updated: 08th September 2019 12:14 PM   |  A+A-


Sanju Samson

ಸಂಜು ಸ್ಯಾಮ್ಸನ್

Posted By : Vishwanath S
Source : Online Desk

ತಿರುವನಂತಪುರಂ: ಜಗತ್ತಿನ ಶ್ರೀಮಂತ ಕ್ರಿಕೆಟಿಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೀಮಂತ ಕ್ರಿಕೆಟಿಗ ಎಂಎಸ್ ಧೋನಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲೊಬ್ಬ ಆಟಗಾರ ತನಗೆ ನೀಡುವ ಪಂದ್ಯದ ಸಂಭಾವನೆಯನ್ನೇ ಮೈದಾನದ ಸಿಬ್ಬಂದಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.  

ಹೌದು, ಟೀಂ ಇಂಡಿಯಾ ಎ ತಂಡದ ಆಟಗಾರ ಸಂಜು ಸ್ಯಾಮ್ ಸನ್ ಗ್ರೀನ್ ಫೀಲ್ಡ್ ಮೈದಾನದ ಸಿಬ್ಬಂದಿಗಳಿಗೆ ತನಗೆ ಸಿಕ್ಕ 1.5 ಲಕ್ಷ ರುಪಾಯಿಯನ್ನು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ತಂಡಗಳು ನಡುವೆ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿ ನಡೆದಿದ್ದು ಭಾರತ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತ್ತು. 

ಇನ್ನು ಕೇರಳದಲ್ಲಿ ನಡೆದಿದ್ದ ಪಂದ್ಯಗಳಿಗೆ ಮಳೆಯಿಂದ ಅಡ್ಡಿಯಾಗಿತ್ತು. ಹೀಗಾಗಿ ಕೆಲ ಓವರ್ ಗಳನ್ನು ಕಡಿತಗೊಳಿಸಲಾಗಿತ್ತು. ಹೀಗೆ ಪಂದ್ಯಗಳ ವೇಳೆ ಮಳೆಯಾದಾಗ ಅಲ್ಲಿನ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿ ಪಂದ್ಯಗಳು ಪುನರಾರಂಭವಾಗುವುದಕ್ಕೆ ಕಾರಣರಾಗಿದ್ದರು. ಹೀಗಾಗಿ ನನ್ನ ಸಂಭಾವಣೆಯನ್ನು ಸಿಬ್ಬಂದಿಗಳಿಗೆ ನೀಡಿದ್ದಾಗಿ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp