ಅಂಡರ್ 19 ಏಷ್ಯಾ ಕಪ್ : ಪಾಕಿಸ್ತಾನ ಬಗ್ಗುಬಡಿದ ಭಾರತ

ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ  19 ವರ್ಷದೊಳಗಿನವರ ಏಷ್ಯಾ ಕಪ್ ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಅಜಾದ್ ಹಾಗೂ ಎನ್ ಟಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 60 ರನ್ ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದೆ.

Published: 08th September 2019 10:37 AM  |   Last Updated: 08th September 2019 10:37 AM   |  A+A-


ಅರ್ಜುನ್ ಅಜಾದ್

Posted By : Nagaraja AB
Source : Online Desk

ಮೊರಾಟುವಾ: ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ  19 ವರ್ಷದೊಳಗಿನವರ ಏಷ್ಯಾ ಕಪ್ ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಅಜಾದ್ ಹಾಗೂ ಎನ್ ಟಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 60 ರನ್ ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 305 ರನ್ ಗಳ ಸವಾಲಿನ ಮೊತ್ತ ಗಳಿಸಿತು. ಅರ್ಜುನ್ ಅಜಾದ್ 121 ಹಾಗೂ ತಿಲಕ್ 110 ರನ್ ಗಳನ್ನು ಕಲೆ ಹಾಕಿದರು.  ಇವರಿಬ್ಬರ ಎರಡನೇ ವಿಕೆಟ್ ಜೊತೆಯಾದಲ್ಲಿ 183 ರನ್ ಹರಿದುಬಂದಿತು. 

ಟೀಂ ಇಂಡಿಯಾ ನೀಡಿದ ಸವಾಲಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ  46.4 ಓವರ್ ಗಳಲ್ಲಿ 245 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ನಾಯಕ ರೊಹಾಲಿ ಖಾನ್ 108 ಎಸೆತಗಳಲ್ಲಿ 117 ರನ್ ಗಳಿಸಿದರೆ  ಹ್ಯಾರೀಸ್ ಖಾನ್ 43 ರನ್ ಗಳಿಸಿದರು. 41ನೇ ಓವರ್ ನಲ್ಲಿ ರೊಹಾಲಿಯನ್ನು ಅಕಾಶ್ ಸಿಂಗ್ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು. ಇದರೊಂದಿಗೆ ಪಾಕಿಸ್ತಾನದ ಹೋರಾಟ ಅಂತ್ಯಗೊಂಡಿತು. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp