ಆ್ಯಶಸ್ ಸರಣಿ ಸೋಲಿನ ಭೀತಿ: ಸ್ಮಿತ್ 'ಮೋಸಗಾರ' ಎಂಬುದು ಮರೆಯಲಾರೆ ಎಂದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ

ಸ್ಟೀವನ್‌ ಸ್ಮಿತ್‌ ವಿಶ್ವ ಕ್ರಿಕೆಟ್‌ನಲ್ಲಿ ಮಾಡಿರುವ ಮೋಸವನ್ನು ಮರೆಯಲು ಸಾಧ್ಯವೇ ಇಲ್ಲ. ಆತ  ಮೋಸಗಾರ ಎಂಬುದು ತಿಳಿದ ಬಳಿಕ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಖಂಡಿತಾ ಮಾಡಲಾರೆ ಆಸ್ಟ್ರೇಲಿಯಾದ ಮೂವರು ಆಟಗಾರರು ಮೋಸದಾಟವಾಡಿದ್ದಾರೆ.
ಸ್ಟೀವ್ ಸ್ಮಿತ್-ಸ್ಟೀವ್ ಹಾರ್ಮಿಸನ್
ಸ್ಟೀವ್ ಸ್ಮಿತ್-ಸ್ಟೀವ್ ಹಾರ್ಮಿಸನ್

ಮ್ಯಾಂಚೆಸ್ಟರ್‌: ಸ್ಟೀವನ್‌ ಸ್ಮಿತ್‌ ವಿಶ್ವ ಕ್ರಿಕೆಟ್‌ನಲ್ಲಿ ಮಾಡಿರುವ ಮೋಸವನ್ನು ಮರೆಯಲು ಸಾಧ್ಯವೇ ಇಲ್ಲ. ಆತ  ಮೋಸಗಾರ ಎಂಬುದು ತಿಳಿದ ಬಳಿಕ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಖಂಡಿತಾ ಮಾಡಲಾರೆ ಆಸ್ಟ್ರೇಲಿಯಾದ ಮೂವರು ಆಟಗಾರರು ಮೋಸದಾಟವಾಡಿದ್ದಾರೆ. ಇದು ಅವರ ವೃತ್ತಿ ಬದುಕಿಗೆ ಅಂಟಿಕೊಂಡ ಕಲೆ. ಇದನ್ನು ಸಾಯುವವರೆಗೂ ಅವರು ಹೊರಬೇಕಾಗುತ್ತದೆ ಎಂದು ಇಂಗ್ಲೆಂಡ್‌ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್‌ ಮಾತಿನ ಚಾಟಿಯೇಟನ್ನು ನೀಡಿದ್ದಾರೆ.

ಪ್ರಸಕ್ತ ಆ್ಯಶಸ್‌ ಟೆಸ್ಟ್‌ ಸರಣಿಯಲ್ಲಿ ರನ್‌ ಹೊಳೆ ಹರಿಸಿರುವ ಆಸ್ಟ್ರೇಲಿಯಾ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ಗೆ ಇಡೀ ಕ್ರಿಕೆಟ್‌ ಜಗತ್ತೇ ಶಹಬ್ಬಾಶ್‌ ಹೇಳುತ್ತಿದ್ದರೆ, ಇಂಗ್ಲೆಂಡ್‌ ತಂಡದ ಮಾಜಿ ವೇಗಿ ಸ್ಟೀವನ್‌ ಹಾರ್ಮಿಸನ್‌ ಮಾತ್ರ ಆಸೀಸ್‌ನ ಮಾಜಿ ನಾಯಕನಿಗೆ ಮಾತಿನ ಚಾಟಿಯೇಟು ನೀಡಿದ್ದಾರೆ. 

ಭಾನುವಾರ ಮುಕ್ತಾಯಗೊಂಡ ಆ್ಯಶಸ್‌ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮಿಂಚಿದ ಆಸ್ಟ್ರೇಲಿಯಾ ತಂಡ 185 ರನ್‌ಗಳ ಭರ್ಜರಿ ಜಯ ದಾಖಲಿಸಿ 5 ಟೆಸ್ಟ್‌ಗಳ ಸರಣಿಯಲ್ಲಿ 2-1 ಮುನ್ನಡೆಯೊಂದಿಗೆ ಆ್ಯಷಸ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಸೆ.12ರಂದು ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೂ ಸರಣಿ 2-2 ರಲ್ಲಿ ಸಮಬಲಗೊಳ್ಳಲಿದ್ದು ಟ್ರೋಫಿ ಕಾಂಗರೂ ಪಾಳಯದಲ್ಲೇ ಉಳಿಯಲಿದೆ.

ಇನ್ನು ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 211 ರನ್‌ ಮತ್ತು 2ನೇ ಇನಿಂಗ್ಸ್‌ನಲ್ಲಿ 82 ರನ್‌ ದಾಖಲಿಸಿ ಅಬ್ಬರಿಸಿದ ಸ್ಮಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 30 ವರ್ಷದ ಬ್ಯಾಟ್ಸ್‌ಮನ್‌ ಸರಣಿಯಲ್ಲಿ ಈವರೆಗೆ ಮೂರು ಪಂದ್ಯಗಳಿಂದ 5 ಇನಿಂಗ್ಸ್‌ಗಳಲ್ಲಿ 134.20ರ ಸರಾಸರಿಯಲ್ಲಿ 671 ರನ್‌ಗಳನ್ನು ಚೆಚ್ಚಿದ್ದಾರೆ. 

ಸರಣಿಯಲ್ಲಿ 2ನೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿರುವ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ 8 ಇನಿಂಗ್ಸ್‌ಗಳಿಂದ 354 ರನ್‌ಗಳನ್ನು ಗಳಿಸಿದ್ದಾರೆ. ಸ್ಮಿತ್‌, ತಮ್ಮ ಈ ಬ್ಯಾಟಿಂಗ್‌ ವೈಭವದ ಮೂಲಕ ಟೆಸ್ಟ್‌ ವಿಶ್ವ ಶ್ರೇಯಾಂಕದಲ್ಲಿ ಮರಳಿ ನಂ.1 ಬ್ಯಾಟ್ಸ್‌ಮನ್‌ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್‌ ಹಾರ್ಮಿಸನ್‌, "ಸ್ಮಿತ್‌ ವಿಶ್ವ ಕ್ರಿಕೆಟ್‌ನಲ್ಲಿ ಮಾಡಿರುವ ಮೋಸವನ್ನು ಮರೆಯಲು ಸಾಧ್ಯವೇ ಇಲ್ಲ. ಆತ ಮೋಸಗಾರ ಎಂಬುದು ತಿಳಿದ ಬಳಿಕ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಖಂಡಿತಾ ಮಾಡಲಾರೆ ಎಂದು ಹೇಳಿದ್ದಾರೆ. 

ಕಳೆದ ವರ್ಷ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಚೆಂಡನ್ನು ವಿರೂಪಗೊಳಿಸಿ ಮೋಸದ ಆವಾಡಲು ಯತ್ನಿಸಿದ್ದನ್ನು ಆಸೀಸ್‌ನ ಅಂದಿನ ನಾಯಕ ಸ್ಟೀವನ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ ಒಪ್ಪಿಕೊಂಡು ಬರೋಬ್ಬರಿ 12 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಸ್ಯಾಂಡ್‌ ಪೇಪ್‌ ಬಳಸಿ ಚೆಂಡನ್ನು ವಿರೂಪಗೊಳಿಸುತ್ತಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯತಾದ ಬಳಿಕ ತಪ್ಪನ್ನು ಒಪ್ಪಿಕೊಳ್ಳದ ಹೊರತಾಗಿ ಬೇರೆ ಯಾವುದೇ ಮಾರ್ಗ ಆಸೀಸ್‌ ಆಟಗಾರರ ಬಳಿ ಇರಲಿಲ್ಲ.

"ಸ್ಮಿತ್‌ ಎಷ್ಟೇ ಸಾಧನೆ ಮಾಡಿದರೂ ದಕ್ಷಿಣ ಆಫ್ರಿಕಾದಲ್ಲಿ ಆತ ಮಾಡಿದ ಕೆಲಸ ನೆನಪಿಗೆ ಬರುತ್ತದೆ. ಸ್ಮಿತ್‌, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಬಗೆಗಿನ ಅಭಿಪ್ರಾಯ ಎಂದಿಗೂ ಬದಲಾಗಲು ಸಾಧ್ಯವಿಲ್ಲ. ಅವರು ಕ್ರಿಕೆಟ್‌ ಆಟಕ್ಕೆ ಕಳಂಕ ತಂದಿದ್ದಾರೆ," ಎಂದು ಹಾರ್ಮಿಸನ್‌ ಹಿಗ್ಗಾಮಗ್ಗ ಜರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com