ಭದ್ರತೆಯ ಭಯ: ಪಾಕ್ ಪ್ರವಾಸದಿಂದ ಹೊರಗುಳಿದ 10 ಶ್ರೀಲಂಕಾ ಕ್ರಿಕೆಟಿಗರು
ಶ್ರೀಲಂಕಾ ಟಿ20 ತಂಡದ ನಾಯಕ ಲಸಿತ್ ಮಾಲಿಂಗ್ ಸೇರಿದಂತೆ ಲಂಕಾದ 10 ಹಿರಿಯ ಆಟಗಾರರು ಭದ್ರತೆಯ ಕಾರಣ ನೀಡಿ ಈ ತಿಂಳಾಂತ್ಯಕ್ಕೆ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ಭಾಗವಹಿಸಲು...
Published: 09th September 2019 10:23 PM | Last Updated: 09th September 2019 10:23 PM | A+A A-

ಶ್ರೀಲಂಕಾ ತಂಡ
ಕೊಲಂಬೊ: ಶ್ರೀಲಂಕಾ ಟಿ20 ತಂಡದ ನಾಯಕ ಲಸಿತ್ ಮಾಲಿಂಗ್ ಸೇರಿದಂತೆ ಲಂಕಾದ 10 ಹಿರಿಯ ಆಟಗಾರರು ಭದ್ರತೆಯ ಕಾರಣ ನೀಡಿ ಈ ತಿಂಳಾಂತ್ಯಕ್ಕೆ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಉಗ್ರ ದಾಳಿ ನಡೆದಿತ್ತು. ಅದೃಷ್ಟವಶಾತ್ ಆಟಗಾರರು ಅಪಾಯದಿಂದ ಪಾರಾಗಿದ್ದರು. ಈ ಘಟನೆ ನಂತರ ಪಾಕ್ ಪ್ರವಾಸ ಕೈಗೊಳ್ಳಲು ಅಂತರಾಷ್ಟ್ರೀಯ ತಂಡಗಳು ನಿರಾಕರಿಸುತ್ತಿವೆ.
ಆರು ಪಂದ್ಯಗಳ ಸೀಮಿತ ಓವರ್ ಸರಣಿಗೆ ಆಯ್ಕೆಯಾದ ಪ್ರಾಥಮಿಕ ತಂಡಕ್ಕೆ ಭದ್ರತಾ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಮತ್ತು ಪಾಕ್ ಪ್ರವಾಸಕ್ಕೆ ತೆರಳುವ ಬಗ್ಗೆ ಆಟಗಾರರೇ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
10 ಆಟಗಾರರು ಪಾಕ್ ಪ್ರವಾಸದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಲಸಿತ್ ಮಾಲಿಂಗ್, ಆಂಜೆಲೋ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲ್ಲಾ, ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಅಕಿಲಾ ಧನಂಜಯ, ಸುರಂಗ ಲಕ್ಮಲ್, ದಿನೇಶ್ ಚಂಡಿಮಾಲ್ ಮತ್ತು ದಿಮುತ್ ಕರುಣರತ್ನೆ ಅವರು ಪಾಕ್ ಪ್ರವಾಸಕ್ಕೆ ತೆರಳಲು ನಿರಾಕರಿಸಿದ್ದಾರೆ.