ಮೊಹಮ್ಮದ್ ಶಮಿ ಶರಣಾಗತಿ ಅಗತ್ಯವಿಲ್ಲ, ತಡೆಯಾಜ್ಞೆ ಸಿಕ್ಕಿದೆ: ವಕೀಲರು

ಸೆಪ್ಟೆಂಬರ್ 2ರಿಂದ 15 ದಿನಗಳೊಳಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಶರಣಾಗುವಂತೆ  ಕೊಲ್ಕತ್ತಾದ ಆಲಿಪೊರ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ  ಶಮಿ ಪರ ವಕೀಲರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ನವದೆಹಲಿ: ಸೆಪ್ಟೆಂಬರ್ 2ರಿಂದ 15 ದಿನಗಳೊಳಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಶರಣಾಗುವಂತೆ  ಕೊಲ್ಕತ್ತಾದ ಆಲಿಪೊರ್ ನ್ಯಾಯಾಲಯ ನೀಡಿದ್ದ ಆದೇಶಕ್ಕೆ  ಶಮಿ ಪರ ವಕೀಲರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.

ನ್ಯಾಯಾಲಯದ ಕ್ರಮವು ಕಾನೂನು ಪ್ರಕ್ರಿಯೆಯ ವಿರುದ್ದವಾಗಿದೆ  ಶಮಿ ಶರಣಾಗುವ  ಶರಣಾಗುವಂತೆ ಕೇಳುವ ಯಾವುದೇ ಮಾರ್ಗಗಳಿಲ್ಲ. ಮೊಹಮ್ಮದ್ ಶಮಿ ಅಥವಾ ಅವರ ಪ್ರತಿನಿಧಿಗೆ ಮೊದಲನೇಯದಾಗಿ ಸಮನ್ಸ್ ನೀಡಬೇಕಾಗಿತ್ತು ಎಂದು ಮೊಹಮ್ಮದ್ ಶಮಿ ಪರ ವಕೀಲ ಸಲೀಂ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸಮನ್ಸ್ ನೀಡಿದ್ದರೆ ಶರಣಾಗತಿಗೆ ನೋಟಿಸ್ ನೀಡುವ ಅಗತ್ಯವಿರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದೇವೆ. ನಾಳೆ ಎಲ್ಲವೂ ಗೊತ್ತಾಗಲಿದೆ  ಎಂದು ಅವರು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ಮೊಹಮ್ಮದ್ ಶಮಿ ಅಮೆರಿಕಾದಿಂದ ವಾಪಾಸ್ಸಾಗಿರಬಹುದು. ಆದರೆ, ಬಿಸಿಸಿಐ ಹಾಗೂ ತಮ್ಮ ಪರ ವಕೀಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ಹಲ್ಲೆ, ದೌರ್ಜನ್ಯ ಪ್ರಕರಣವನ್ನು ಅವರ ಪತ್ನಿ ಹಸೀನ್ ಜಹಾನ್ ದಾಖಲಿಸಿದ್ದರು. 15 ದಿನಗಳೊಳಗೆ ಶರಣಾಗುವಂತೆ ಕೋಲ್ಕತ್ತಾದ ಅಲಿಪೊರ್ ನ್ಯಾಯಾಲಯ ಶಮಿಗೆ ಆದೇಶ ನೀಡಿತ್ತು.

ಮೊಹಮ್ಮದ್ ಶಮಿ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಅಮೆರಿಕಾದಲ್ಲಿದ್ದಾರೆ. ಸೆಪ್ಟೆಂಬರ್ 12 ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com