ಅನುಭವ ಮಾರುಕಟ್ಟೆಯಲ್ಲಿ ಸಿಗುವ ಸರಕಲ್ಲ, ಶ್ರಮ ಬೇಕು: ರವಿಶಾಸ್ತ್ರಿ

ಅನುಭವ ಎಂಬುದು ಮಾರುಕಟ್ಟೆಯಲ್ಲಿ ದೊರಕುವ ಸರಕೂ ಅಲ್ಲ. ಅದನ್ನು ಯಾರೂ ಮಾರಾಟ ಮಾಡಲು  ಸಾಧ್ಯವಿಲ್ಲ, ಖರೀದಿಸಲು ಆಗುವುದಿಲ್ಲ ಎಂದು ಟೀ ಇಂಡಿಯಾ ಪ್ರಧಾನ ತರಬೇತುದಾರ ರವಿಶಾಸ್ತ್ರಿ ಹೇಳಿದ್ದಾರೆ.
ರವಿಶಾಸ್ತ್ರಿ
ರವಿಶಾಸ್ತ್ರಿ

ನವದೆಹಲಿ: ಅನುಭವ ಎಂಬುದು ಮಾರುಕಟ್ಟೆಯಲ್ಲಿ ದೊರಕುವ ಸರಕೂ ಅಲ್ಲ. ಅದನ್ನು ಯಾರೂ ಮಾರಾಟ ಮಾಡಲು  ಸಾಧ್ಯವಿಲ್ಲ, ಖರೀದಿಸಲು ಆಗುವುದಿಲ್ಲ ಎಂದು ಟೀ ಇಂಡಿಯಾ ಪ್ರಧಾನ ತರಬೇತುದಾರ ರವಿಶಾಸ್ತ್ರಿ ಹೇಳಿದ್ದಾರೆ.

ನಾಲ್ಕು ದಶಕಗಳಿಂದ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ. ಈಗ ಉನ್ನತ ಸ್ಥಾನಕ್ಕೇರಲು ತಮ್ಮ ಅನುಭವ ಸುದೀರ್ಘ ಅನುಭವ ಉಪಯೋಗಕ್ಕೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. 2017 ರಿಂದ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಅವರಿಗೆ ಮತ್ತೊಮ್ಮೆ   ಸ್ಥಾನ ಕಲ್ಪಿಸಲಾಗಿದ್ದು ಅವರು 2021ರವರೆಗೆ ಟಿ20 ವಿಶ್ವಕಪ್‌ನ ಮುಖ್ಯ ಕೋಚ್ ಆಗಿರುತ್ತಾರೆ. ತಂಡದ ನಾಯಕ ವಿರಾಟ್ ಕೊಹ್ಲಿ  ಅವರ ನಿಕಟವರ್ತಿಯಾಗಿರುವ ರವಿಶಾಸ್ತ್ರಿ ಅವರ ಮರು ನೇಮಕ ತೀವ್ರ ಟೀಕೆಗೂ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಗಲ್ಫ್ ನ್ಯೂಸ್‌ ನೊಂದಿಗೆ ಮಾತನಾಡಿ, "ನಾನು ನನ್ನನ್ನು ಜೆಡ್ಜ್ ಮಾಡಿಕೊಳ್ಳಲು ಬಯಸುವುದಿಲ್ಲ. ನಲವತ್ತು ವರ್ಷಗಳಿಂದ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡಿದ್ದೇನೆ. 17ನೇ ವಯಸ್ಸಿನಲ್ಲಿ ಮುಂಬೈ ಪರ ಆಡಿದ್ದೇನೆ. ಅದರ ಮಂದಿನ ವರ್ಷ ಭಾರತ ಪರ ಆಡಲು ಆರಂಭಿಸಿದೆ. ಅಂದಿನಿಂದ, ಒಂದು ಕ್ರಿಕೆಟ್ ಹಂಗಾಮನ್ನು ತಪ್ಪಿಸಿಕೊಂಡಿಲ್ಲ ಪ್ರಸಾರಕನಾಗಿ ನಿರ್ದೇಶಕರಾಗಿ ಮತ್ತು ತರಬೇತುದಾರರಾಗಿ ಟೀಂ ಮಿಂಡಿಯಾ ಜೊತೆಗೆ ನನ್ನ ಪ್ರಯಾಣ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com