ಎಂಎಸ್ ಧೋನಿ ನಿವೃತ್ತಿ ವದಂತಿಗಳು,ಕೊನೆಗೂ ಮೌನ ಮುರಿದ ಎಂಎಸ್ ಕೆ ಪ್ರಸಾದ್ 

2016ರ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್  ಧೋನಿ ನಿವೃತ್ತಿ ವದಂತಿಗಳನ್ನು ಹುಟ್ಟು ಹಾಕಿದ್ದು, ಧೋನಿ ಅವರ ಅಭಿಮಾನಿಗಳು ಭಾವಾನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಎಂಎಸ್ ಧೋನಿ, ಎಂಎಸ್ ಕೆ ಪ್ರಸಾದ್
ಎಂಎಸ್ ಧೋನಿ, ಎಂಎಸ್ ಕೆ ಪ್ರಸಾದ್

ನವದೆಹಲಿ:2016ರ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್  ಧೋನಿ ನಿವೃತ್ತಿ ವದಂತಿಗಳನ್ನು ಹುಟ್ಟು ಹಾಕಿದ್ದು, ಧೋನಿ ಅವರ ಅಭಿಮಾನಿಗಳು ಭಾವಾನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಈ ಮಧ್ಯೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಗಾರರನ್ನು ಹೆಸರನ್ನು ಆಯ್ಕೆ ಮಾಡಿದ ಬಳಿಕ ಮಾತನಾಡಿದ ಟೀಂ ಇಂಡಿಯಾ ಆಯ್ಕೆದಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್,  ಧೋನಿ ನಿವೃತ್ತಿ ಬಗ್ಗೆ ಬಿಸಿಸಿಐ ಬಳಿ ಯಾವುದೇ ಮಾಹಿತಿ ಇಲ್ಲ. ಇದು ಸುಳ್ಳಿನ ಸುದ್ದಿ ಎಂದು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ನಾನು ಎಂದಿಗೂ ಮರೆಯಲಾಗದು. ಅದು ವಿಶೇಷ ರಾತ್ರಿಯಾಗಿತ್ತು. ಈ ವ್ಯಕ್ತಿ(ಎಂಎಸ್ ಧೋನಿ) ನನ್ನನ್ನು ಫಿಟ್ ನೆಸ್ ಪರೀಕ್ಷೆಯಲ್ಲಿ ಓಡಿಸುವಂತೆ ಮಾಡಿದ್ದರು ಎಂದು ಕೊಹ್ಲಿ ಟ್ವೀಟಿಸಿದ್ದರು.

ಇದಕ್ಕೆ ಟ್ವೀಟರಿಗರು ಎಂಎಸ್ ಧೋನಿ ನಿವೃತ್ತಿ ತೆಗೆದುಕೊಳ್ಳುತ್ತಾರಾ? ಎಂದು ಪ್ರಶ್ನಿಸುತ್ತಾ ರೀಟ್ವೀಟ್ ಮಾಡುತ್ತಿದ್ದಾರೆ.

2019 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಬಳಿಕ ಧೋನಿ ಬಿಸಿಸಿಐ ಬಳಿ ಎರಡು ತಿಂಗಳ ರಜೆ ಕೇಳಿದ್ದರು. ಅವರ ಗೈರು ಹಾಜರಿಯಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಎಲ್ಲಾ ಮಾದರಿಯ ಸರಣಿಯಲ್ಲೂ ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು. ಎಲ್ಲಾ ಮಾದರಿಯಲ್ಲೂ ಧೋನಿ ಬದಲಿಗೆ ರಿಷಬ್ ಪಂತ್ ವಿಕೆಟ್ ಕೀಪರ್ ಮಾಡಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಎದುರು ನೋಡುತ್ತಿರುವುದಾಗಿ ಎಂಎಸ್ ಕೆ ಪ್ರಸಾದ್ ತಿಳಿಸಿದ್ದಾರೆ 

 ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವರೆಗೂ ರಿಷಬ್ ಪಂತ್ ಅವರಿಗೆ ಮೆಂಟರ್ ಆಗಿ ಧೋನಿ ಮುಂದುವರೆಯುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com