ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಗುಡ್ ಬೈ? ಈ ಕುರಿತು ಪತ್ನಿ ಸಾಕ್ಷಿ ಧೋನಿ ಹೇಳಿದ್ದು!

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ವದಂತಿಗಳು ಜೋರಾಗಿದ್ದು ಇದಕ್ಕೆ ಧೋನಿ ಪತ್ನಿ ಸಾಕ್ಷಿ ಟ್ವೀಟ್ ಮಾಡಿ ಪುಲ್ ಸ್ಟಾಪ್ ಇಟ್ಟಿದ್ದಾರೆ.

Published: 12th September 2019 07:18 PM  |   Last Updated: 12th September 2019 07:35 PM   |  A+A-


MS Dhoni-Sakshi

ಎಂಎಸ್ ಧೋನಿ-ಸಾಕ್ಷಿ

Posted By : Vishwanath S
Source : Online Desk

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ವದಂತಿಗಳು ಜೋರಾಗಿದ್ದು ಇದಕ್ಕೆ ಧೋನಿ ಪತ್ನಿ ಸಾಕ್ಷಿ ಟ್ವೀಟ್ ಮಾಡಿ ಪುಲ್ ಸ್ಟಾಪ್ ಇಟ್ಟಿದ್ದಾರೆ. 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ವೊಂದು ಭಾರೀ ವೈರಲ್ ಆಗಿದ್ದು ಧೋನಿಯ ನಿವೃತ್ತಿ ಕುರಿತು ಕೊಹ್ಲಿ ಸುಳಿವು ಕೊಟ್ಟಿದ್ದಾರಾ ಎಂಬ ಪ್ರಶ್ನೆಗಳು ನೆಟಿಗರ ಎತ್ತಿದ್ದರು. 

2016ರ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿ ವಿರಾಟ್ ಕೊಹ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು ಎಂಎಸ್ ಧೋನಿ ನಿವೃತ್ತಿ ತೊಗೆದುಕೊಳ್ಳುತ್ತಾರೆ ಎಂಬ ಸುಳಿವು ಸಿಕ್ಕಿದೆ ಎಂಬ ನೆಟಿಗರು ಟ್ವೀಟ್ ನ ವೈರಲ್ ಮಾಡಿದ್ದರು.

ಕೊಹ್ಲಿ ಟ್ವೀಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ನಾನು ಎಂದಿಗೂ ಮರೆಯಲಾಗದು. ಅದು ವಿಶೇಷ ರಾತ್ರಿಯಾಗಿತ್ತು. ಈ ವ್ಯಕ್ತಿ(ಎಂಎಸ್ ಧೋನಿ) ನನ್ನನ್ನು ಫಿಟ್ ನೆಸ್ ಪರೀಕ್ಷೆಯಲ್ಲಿ ಓಡಿಸುವಂತೆ ಮಾಡಿದ್ದರು ಎಂದು ಟ್ವೀಟಿಸಿದ್ದರು. ಇದಕ್ಕೆ ಟ್ವೀಟರಿಗರು ಎಂಎಸ್ ಧೋನಿ ನಿವೃತ್ತಿ ತೆಗೆದುಕೊಳ್ಳುತ್ತಾರಾ? ಎಂದು ಪ್ರಶ್ನಿಸುತ್ತಾ ರೀಟ್ವೀಟ್ ಮಾಡುತ್ತಿದ್ದರು. 

ಇದಕ್ಕೆ ಟ್ವೀಟ್ ಮಾಡಿರುವ ಸಾಕ್ಷಿ ಧೋನಿ ಇದೆಲ್ಲಾ ಬರೀ ವದಂತಿ ಎಂದು ಹೇಳಿದ್ದಾರೆ.

Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp