ಟ್ಟೀಟ್ ಮೂಲಕ ಎಂಎಸ್ ಧೋನಿ ನಿವೃತ್ತಿ ಸುಳಿವು ಕೊಟ್ರಾ ವಿರಾಟ್ ಕೊಹ್ಲಿ, ಟ್ವೀಟ್ ವೈರಲ್!

ಕ್ರಿಕೆಟ್ ವಲಯದಲ್ಲಿ ಸದ್ಯ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಯಾವಾಗ? ಎಂಬ ಪ್ರಶ್ನೆಗಳು ಜೋರಾಗಿವೆ. ಈ ಮಧ್ಯೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್ ವೊಂದು ಇದೀಗ ಭಾರೀ ವೈರಲ್ ಆಗಿದ್ದು ಧೋನಿಯ ನಿವೃತ್ತಿ ಕುರಿತು ಕೊಹ್ಲಿ ಸುಳಿವು ಕೊಟ್ಟಿದ್ದಾರಾ ಎಂಬ ಪ್ರಶ್ನೆಗಳು ನೆಟಿಗರಲ್ಲಿ ಜೋರಾಗಿದೆ.
ಎಂಎಸ್ ಧೋನಿ-ವಿರಾಟ್ ಕೊಹ್ಲಿ
ಎಂಎಸ್ ಧೋನಿ-ವಿರಾಟ್ ಕೊಹ್ಲಿ

ನವದೆಹಲಿ: ಕ್ರಿಕೆಟ್ ವಲಯದಲ್ಲಿ ಸದ್ಯ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಯಾವಾಗ? ಎಂಬ ಪ್ರಶ್ನೆಗಳು ಜೋರಾಗಿವೆ. ಈ ಮಧ್ಯೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್ ವೊಂದು ಇದೀಗ ಭಾರೀ ವೈರಲ್ ಆಗಿದ್ದು ಧೋನಿಯ ನಿವೃತ್ತಿ ಕುರಿತು ಕೊಹ್ಲಿ ಸುಳಿವು ಕೊಟ್ಟಿದ್ದಾರಾ ಎಂಬ ಪ್ರಶ್ನೆಗಳು ನೆಟಿಗರಲ್ಲಿ ಜೋರಾಗಿದೆ.

2016ರ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿ ವಿರಾಟ್ ಕೊಹ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು ಎಂಎಸ್ ಧೋನಿ ನಿವೃತ್ತಿ ತೊಗೆದುಕೊಳ್ಳುತ್ತಾರೆ ಎಂಬ ಸುಳಿವು ಸಿಕ್ಕಿದೆ ಎಂಬ ನೆಟಿಗರು ಟ್ವೀಟ್ ನ ವೈರಲ್ ಮಾಡಿದ್ದಾರೆ.

ಕೊಹ್ಲಿ ಟ್ವೀಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ನಾನು ಎಂದಿಗೂ ಮರೆಯಲಾಗದು. ಅದು ವಿಶೇಷ ರಾತ್ರಿಯಾಗಿತ್ತು. ಈ ವ್ಯಕ್ತಿ(ಎಂಎಸ್ ಧೋನಿ) ನನ್ನನ್ನು ಫಿಟ್ ನೆಸ್ ಪರೀಕ್ಷೆಯಲ್ಲಿ ಓಡಿಸುವಂತೆ ಮಾಡಿದ್ದರು ಎಂದು ಟ್ವೀಟಿಸಿದ್ದರು.

ಇದಕ್ಕೆ ಟ್ವೀಟರಿಗರು ಎಂಎಸ್ ಧೋನಿ ನಿವೃತ್ತಿ ತೆಗೆದುಕೊಳ್ಳುತ್ತಾರಾ? ಎಂದು ಪ್ರಶ್ನಿಸುತ್ತಾ ರೀಟ್ವೀಟ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com