ಕೊಹ್ಲಿ ಕೈಗೆ ಅನುಷ್ಕಾ ಕಿಸ್: ವಿಡಿಯೋ ವೈರಲ್, ನೆಟ್ಟಿಗರಿಂದ ಮೆಚ್ಚುಗೆಯೋ ಮೆಚ್ಚುಗೆ!
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನುಷ್ಕಾ ಶರ್ಮಾ ಅವರು, ಪತಿ ವಿರಾಟ್ ಕೊಹ್ಲಿಯವರಿಗೆ ನೀಡಿರುವ ಕಿಸ್ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
Published: 13th September 2019 02:01 PM | Last Updated: 13th September 2019 02:40 PM | A+A A-

ಕಾರ್ಯಕ್ರಮದಲ್ಲಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ
ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನುಷ್ಕಾ ಶರ್ಮಾ ಅವರು, ಪತಿ ವಿರಾಟ್ ಕೊಹ್ಲಿಯವರಿಗೆ ನೀಡಿರುವ ಕಿಸ್ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ವಿಶ್ವದ ಶ್ರೇಷ್ಠ ಕ್ರಿಕೆಟ್ ಮೈದಾನಗಳ ಪೈಕಿ ಒಂದಾಗಿರುವ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಜೊತೆಗೆ ಮೈದಾನದ ಒಂದು ಪೆವಿಲಿಯನ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿರುಷ್ಕಾ ಜೋಡಿ, ಗಣ್ಯರ ಮಧ್ಯೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿಯವರ ಕೈಗೆ ಅನುಷ್ಕಾ ಮುತ್ತು ನೀಡಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇಬ್ಬರ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಪ್ರಸಿದ್ಧ ಮನರಂಜನೆ ತಾಣವಾದ ಫಿಲ್ಮ್ ಫೇರ್ ವಿಡಿಯೋವನ್ನು ಹಂಚಿಕೊಂಡು ಮುದ್ದಾಗಿದೆ ಎಂದು ಬರೆದುಕೊಂಡಿದೆ.
Cute! @AnushkaSharma and @imVkohli caught in an adorable moment during an event in Delhi. pic.twitter.com/C3siyPkWFH
— Filmfare (@filmfare) September 12, 2019
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿಯವರು, ಇದು ಸುಂದರವಾದ ಸಂಜೆಯಾಗಿದೆ. ನನಗಿದು ಎರೆಡೆರಡು ಸಂತೋಷವನ್ನು ನೀಡಿದೆ. ಇದೇ ಸಂಜೆ ಕ್ರೀಡಾಂಗಣಕ್ಕೆ ಗೌರವಾನ್ವಿತ ಜೇಟ್ಲಿಯವರ ಹೆಸರನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಹಲವು ವರ್ಷಗಳಿಂದ ಸಹಕಾರ ನೀಡಿದ ತಮ್ಮ ಕುಟುಂಬಕ್ಕೆ ಹಾಗೂ ಬಾಲ್ಯದ ತರಬೇತುದಾರ ರಾಜ್ ಕುಮಾರ್ ಶರ್ಮಾ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
2001ರಲ್ಲಿ ಕ್ರಿಕೆಟ್ ನೋಡಲು ಟಿಕೆಟ್ ಪಡೆದು ಸ್ಟೇಡಿಯಂಗೆ ಬರುತ್ತಿದ್ದೆ. ಆಟಗಾರರ ಆಟೋಗ್ರಾಫ್ ಕೇಳುತ್ತಿದ್ದೆ. ಇದೇ ಸ್ಟೇಡಿಯಂ ನಲ್ಲಿ ನನಗಿಂದು ಗೌರವ ಸಿಗುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದತು ತಿಳಿಸಿದ್ದಾರೆ.