ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ: 7 ಎಸೆತದಲ್ಲಿ 7 ಸಿಕ್ಸ್ ದಾಖಲೆ ಬರೆದ ಆಫ್ಗಾನ್ ಬ್ಯಾಟ್ಸ್‌ಮನ್‌ಗಳು!

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಆಫ್ಗಾನ್ ತಂಡದ ಬ್ಯಾಟ್ಸ್‌ಮನ್‌ಗಳು ಸತತ 7 ಎಸೆತದಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.

Published: 14th September 2019 09:45 PM  |   Last Updated: 14th September 2019 09:45 PM   |  A+A-


Afghan Player

ಆಫ್ಗಾನ್ ಬ್ಯಾಟ್ಸ್ ಮನ್

Posted By : Vishwanath S
Source : Online Desk

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಆಫ್ಗಾನ್ ತಂಡದ ಬ್ಯಾಟ್ಸ್‌ಮನ್‌ಗಳು ಸತತ 7 ಎಸೆತದಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. 

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಫ್ಗಾನ್ ಆಟಗಾರರಾದ ಮೊಹಮ್ಮದ್ ನಬಿ ಮತ್ತು ನಜಿಬುಲ್ಲಾ ಜೋರ್ಡಾನ್ ಈ ದಾಖಲೆ ಬರೆದಿದ್ದಾರೆ. 17ನೇ ಓವರ್ ಮಾಡಿದ ಟೆಂಡೈ ಚಾಟರ ಬೌಲಿಂಗ್ ನಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ್ದರು. 

ಓವರ್ ಮುಕ್ತಾಯದ ಬಳಿಕ ಕ್ರಿಸ್ ಗೆ ಬಂದ ನಜಿಬುಲ್ಲಾ ಸಹ ನೆವಿಲ್ಲೇ ಓವರ್ ನ ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ಸತತ 7 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದ್ದಾರೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp