ಬಾಂಗ್ಲಾವನ್ನು ಐದು ರನ್ ಗಳಿಂದ ಮಣಿಸಿ ಅಂಡರ್ 19 ಏಷ್ಯಾಕಪ್ ಎತ್ತಿಹಿಡಿದ ಭಾರತ

ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್  ಅಥಾವರ ಅಂಕೊಲೆಕರ್  ಅವರ ಐದು ವಿಕೆಟ್ ಗಳ ನೆರವಿನಿಂದ ಐದು ರನ್ ಗಳಿಂದ ಬಾಂಗ್ಲಾದೇಶವನ್ನು ರೋಚಕ ರೀತಿಯಲ್ಲಿ ಮಣಿಸಿದ ಟೀಂ ಇಂಡಿಯಾ ಅಂಡರ್ 19 ಏಷ್ಯಾಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

Published: 14th September 2019 06:05 PM  |   Last Updated: 14th September 2019 06:08 PM   |  A+A-


IndiaTeam

ಭಾರತ ತಂಡ

Posted By : Nagaraja AB
Source : The New Indian Express

ಕೊಲೊಂಬೊ: ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್  ಅಥಾವರ ಅಂಕೊಲೆಕರ್  ಅವರ ಐದು ವಿಕೆಟ್ ಗಳ ನೆರವಿನಿಂದ ಐದು ರನ್ ಗಳಿಂದ ಬಾಂಗ್ಲಾದೇಶವನ್ನು ರೋಚಕ ರೀತಿಯಲ್ಲಿ ಮಣಿಸಿದ ಟೀಂ ಇಂಡಿಯಾ ಅಂಡರ್ 19 ಏಷ್ಯಾಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

18 ವರ್ಷದ ಅಂಕೊಲೆಕರ್ ಟೀ ಇಂಡಿಯಾ ಪರ 8  ಓವರ್ ಗಳಲ್ಲಿ 28 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಸ್ಟಾರ್ ಆಗಿ ಹೊರಹೊಮ್ಮಿದರು.ಭಾರತ ನೀಡಿದ 106  ರನ್ ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶವನ್ನು 33 ಓವರ್ ಗಳಲ್ಲಿ 101 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಅಂಕೊಲೆಕರ್ ಅವರಿಗೆ ಸಾಥ್ ನೀಡಿದ ವೇಗಿ ಆಕಾಶ್ ಸಿಂಗ್ ಮೂರು ವಿಕೆಟ್ ಗಳನ್ನು ಪಡೆದುಕೊಂಡರು.  ವಿ ಪಾಟೀಲ್ ಹಾಗೂ ಎಸ್ ಎಸ್ ಮಿಶ್ರಾ ತಲಾ ಒಂದೊಂದು  ವಿಕೆಟ್ ಗಳನ್ನು ಪಡೆದುಕೊಂಡರು. 

ಭಾರತ ನೀಡಿದ 107ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಬಾಂಗ್ಲಾದೇಶದ ನಾಯಕ ಅಕ್ಬರ್ ಆಲಿ 23, ಮೃತ್ಯುಂಜಯ ಚೌದರಿ 21 ರನ್ ಗಳಿಸಿದರು. ಇವರು ಔಟಾದ ನಂತರ ಬಂದ ತಾಂಜಿಮ್ ಹಸನ್ ಶಕಿಬ್ 12 ಮತ್ತು ರಾಕಿಬುಲ್ ಹಸನ್ 11 ರನ್ ಗಳಿಸಿದರು.

ಇದಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಧ್ರುವ ಜುರೆಲ್ 33 ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕರಣ್ ಲಾಲ್ 37 ರನ್ ಗಳಿಸುವ ಮೂಲಕ ಟೀಂ ಇಂಡಿಯಾ 100ರ ಗಡಿ ದಾಟಲು ನೆರವಾದರು. 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp