ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದ 'ಕ್ರಿಕೆಟ್‌ ಶಿಶು' ಅಫ್ಘಾನಿಸ್ತಾನ್!

ಕ್ರಿಕೆಟ್‌ ಶಿಶು ಎಂದೇ ಕರೆಯುವ ಅಘ್ಫಾನಿಸ್ತಾನ ತಂಡ ವಿಶ್ವ ಚುಟುಕು ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸೃಷ್ಟಿಸಿದೆ.
ಆಫ್ಗಾನಿಸ್ತಾನ ತಂಡ
ಆಫ್ಗಾನಿಸ್ತಾನ ತಂಡ

ನವದೆಹಲಿ: ಕ್ರಿಕೆಟ್‌ ಶಿಶು ಎಂದೇ ಕರೆಯುವ ಅಘ್ಫಾನಿಸ್ತಾನ ತಂಡ ವಿಶ್ವ ಚುಟುಕು ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸೃಷ್ಟಿಸಿದೆ.

ಭಾನುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟಿ-20 ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ 25 ರನ್‌ ಗಳಿಂದ ಜಯ ಸಾಧಿಸಿದ ಅಫ್ಘಾನಿಸ್ತಾನ ತಂಡ, ಸತತ 12 ಚುಟುಕು ಪಂದ್ಯ ಗೆದ್ದು ನೂತನ ದಾಖಲೆ ಮಾಡಿತು. ಆ ಮೂಲಕ 2009-2010 ರ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಸತತ 12 ಟಿ-20 ಪಂದ್ಯಗಳಲ್ಲಿ ಗೆದ್ದ ದಾಖಲೆಯನ್ನು ಇದೀಗ ಅಫ್ಘಾನಿಸ್ತಾನ ಸರಿಗಟ್ಟಿದೆ.

ಢಾಕಾದಲ್ಲಿ ನಡೆದಿದ್ದ ಭಾನುವಾರದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 164 ರನ್‌ ದಾಖಲಿಸಿತ್ತು. 165 ರನ್‌ ಗುರಿ ಹಿಂಬಾಲಿಸಿದ ಬಾಂಗ್ಲಾದೇಶ 19.5 ಓವರ್‌ಗಳಿಗೆ 139 ರನ್‌ ಗಳಿಗೆ ಕುಸಿಯಿತು. ಅಂತಿಮವಾಗಿ ಆಫ್ಘನ್‌ 25 ರನ್‌ ಗಳಿಂದ ಜಯ ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com