ಅಂತಹ ಭಾರತ ಬೌಲರ್ ನನ್ನು ನಾನೆಂದು ಕಂಡಿಲ್ಲ, ಆರ್‌ಸಿಬಿ ವೇಗಿಯನ್ನು ಹೊಗಳಿದ: ಕ್ಲೂಸೆನರ್

ಭಾರತ ಕ್ರಿಕೆಟ್ ತಂಡ ಯುವ ವೇಗಿ ನವದೀಪ್ ಶೈನಿ ಅವರನ್ನು ದಕ್ಷಿಣ ಆಫ್ರಿಕಾದ ಸಹಾಯಕ ಬ್ಯಾಟಿಂಗ್ ಕೋಚ್ ಲ್ಯಾನ್ಸ್ ಕ್ಲೂಸೆನರ್ ಹೊಗಳಿದ್ದಾರೆ.
ನವದೀಪ್ ಶೈನಿ
ನವದೀಪ್ ಶೈನಿ

ಮೊಹಾಲಿ: ಭಾರತ ಕ್ರಿಕೆಟ್ ತಂಡ ಯುವ ವೇಗಿ ನವದೀಪ್ ಶೈನಿ ಅವರನ್ನು ದಕ್ಷಿಣ ಆಫ್ರಿಕಾದ ಸಹಾಯಕ ಬ್ಯಾಟಿಂಗ್ ಕೋಚ್ ಲ್ಯಾನ್ಸ್ ಕ್ಲೂಸೆನರ್ ಹೊಗಳಿದ್ದಾರೆ.  

ಭಾರತ ತಂಡದ ಭವಿಷ್ಯದ ಆಶಾಕಿರಣ ಎಂದು ಅವರು ಕೊಂಡಾಡಿದ್ದಾರೆ. ಪ್ರಮುಖವಾಗಿ ಶೈನಿ  150 ಕಿ.ಮೀ ವೇಗದಲ್ಲಿ ಚೆಂಡು ಎಸಿಯುವುದನ್ನು ಉಲ್ಲೇಖಿಸುವ ಕ್ಲೂಸೆನರ್, ಈ ರೀತಿಯ ವೇಗದಲ್ಲಿ ಬೌಲಿಂಗ್ ಮಾಡುವ ಭಾರತ ಬೌಲರ್ ನಾನೆಂದೂ ನೋಡಿಲ್ಲ. ಈ ಹಿಂದೆ ಡೆಲ್ಲಿ ಡಿಸ್ಟ್ರಿಕ್ಟ್  ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ) ಜೊತೆ ಕೆಲಸ ಮಾಡಿರುವ ಕ್ಲೂಸೆನರ್, ದೆಹಲಿ ಬೌಲರ್ ಆಗಿರುವ ಶೈನಿ ಪ್ರತಿಭೆಯನ್ನುಮೊದಲೇ  ಗುರುತಿಸಿದ್ದು, ಹಾಗಾಗಿ  ಶೈನಿ  ಅವರ  ಬೌಲಿಂಗ್   ವಿಧಾನ ತಮಗೆ ಆಶ್ಚರ್ಯವೇನು ಮೂಡಿಸಿಲ್ಲ  ಕ್ಲುಸೆನರ್ ಹೇಳಿದ್ದಾರೆ.

ನನಗೆ ಗೊತ್ತಿರುವಂತೆ, ಶೈನಿಯದು ಒಂದು ಅದ್ಭುತ ಬೌಲಿಂಗ್ ಆಕ್ಷನ್. ಆತನ ಆಕ್ಷನ್ ಬಹಳ ಸ್ಪಷ್ಟವಾಗಿದೆ. ಅಷ್ಟೇ ವೇಗವಾಗಿ ಬೌಲಿಂಗ್ ನಡೆಸಲು ಫಿಟ್ ಆಗಿದ್ದಾರೆ. ನಾನು ಅವರೊಂದಿಗೆ ಮಾತನಾಡುವಾಗಲೆಲ್ಲಾ, ಸಾರ್ವಕಾಲಿಕ ವೇಗದ ಬೌಲರ್ ಎಂದು ಹೇಳುತ್ತಿರುತ್ತೇನೆ ಎಂದು ಕ್ಲೂಸೆನರ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚಿಗೆ ನಡೆದ ಟಿ 20 ಸರಣಿ ಮೂಲಕ ಶೈನಿ ಚೊಚ್ಚಲ ಪ್ರವೇಶ ಮಾಡಿದ್ದು ಭಾರಿ ಪ್ರಭಾವ ಬೀರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com