ಒಂದೆಡೆ ಭಾರತದ ವಿರುದ್ಧ ದ್ವೇಷ. ಈ ಮಧ್ಯೆ ರನ್‌ ಮಷೀನ್‌ ಕೊಹ್ಲಿ ಬಗ್ಗೆ ಆಫ್ರಿದಿ ಏನಂದ್ರು ಗೊತ್ತ?

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಅವರು ಭಾರತದ ಬ್ಯಾಟಿಂಗ್ ಮಾಸ್ಟರ್‌ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದು ವಿಶ್ವದಾದ್ಯಂತ ಅಭಿಮಾನಿಗಳನ್ನು ರಂಜಿಸುವಂತೆ ಒತ್ತಾಯಿಸಿದ್ದಾರೆ.
ಶಾಹೀದ್ ಆಫ್ರಿದಿ-ವಿರಾಟ್ ಕೊಹ್ಲಿ
ಶಾಹೀದ್ ಆಫ್ರಿದಿ-ವಿರಾಟ್ ಕೊಹ್ಲಿ

ನವದೆಹಲಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಅವರು ಭಾರತದ ಬ್ಯಾಟಿಂಗ್ ಮಾಸ್ಟರ್‌ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದು ವಿಶ್ವದಾದ್ಯಂತ ಅಭಿಮಾನಿಗಳನ್ನು ರಂಜಿಸುವಂತೆ ಒತ್ತಾಯಿಸಿದ್ದಾರೆ.

ಬುಧವಾರ ರಾತ್ರಿ ದಕ್ಷಿಣ ಆಫ್ರಿಕಾ ನೀಡಿದ್ದ 150 ರನ್‌ ಗುರಿ ಹಿಂಬಾಲಿಸಿದ್ದ ಭಾರತ ತಂಡ, ನಾಯಕ ವಿರಾಟ್‌ ಕೊಹ್ಲಿ ಅವರ ಅಜೇಯ 72 ರನ್‌ಗಳ ನೆರವಿನಿಂದ ಮೂರು ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿ ಗೆಲುವಿನ ದಡ ಸೇರಿತು. ವಿರಾಟ್‌ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಯನ್ನು ಕಳೆದ ರಾತ್ರಿ ಮಾಡಿದರು. 

ಈ ಬಗ್ಗೆ ಟ್ವೀಟ್‌ ಮಾಡಿರುವ ಪಾಕಿಸ್ತಾನದ ಮಾಜಿ ಸ್ಟಾರ್‌ ಆಲ್‌ರೌಂಡರ್‌ ಶೊಯೆಬ್‌ ಅಫ್ರಿದಿ, ಅಭಿನಂದನೆಗಳು ವಿರಾಟ್‌ ಕೊಹ್ಲಿ, ನೀವು ಅದ್ಭುತ ಆಟಗಾರ. ತಮ್ಮ ಬ್ಯಾಟಿಂಗ್‌ ಮೂಲಕ ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸಿ ಎಂದು ಒತ್ತಾಯಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧ ಶತಕ ಸಿಡಿಸುವ ಮೂಲಕ ವಿರಾಟ್‌, ಟಿ-20 ಕ್ರಿಕೆಟ್‌ನಲ್ಲಿ 2,441 ರನ್‌ ಪೂರೈಸಿದರು. ಅಲ್ಲದೇ, ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಭಾಜನರಾಗುವ ಮೂಲಕ ಸಹ ಆಟಗಾರ ರೋಹಿತ್‌ ಶರ್ಮಾ(2,434 ರನ್‌) ಅವರ ದಾಖಲೆ ಹಿಂದಿಕ್ಕಿದರು. ಜತೆಗೆ, ಟೆಸ್ಟ್‌, ಏಕದಿನ ಹಾಗೂ ಟಿ-20 ಮೂರೂ ಮಾದರಿಯಲ್ಲಿ ಶೇ. 50 ರಷ್ಟು ಸರಾಸರಿ ಕಾಯ್ದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com