ಶಿಖರ್ ಧವನ್ ಗೆ ಏನಾಯ್ತು..? ಹೀಗೇಕೆ ಆಡುತ್ತಿದ್ದಾರೆ..? ರೋಹಿತ್ ಶರ್ಮಾ ವಿಡಿಯೋದಲ್ಲೇನಿದೆ?

ಕ್ರಿಕೆಟಿಗ ಶಿಖರ್ ಧವನ್ ಕುರಿತಂತೆ ರೋಹಿತ್ ಶರ್ಮಾ ಮಾಡಿರುವ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Published: 21st September 2019 11:20 AM  |   Last Updated: 21st September 2019 11:20 AM   |  A+A-


Rohit Sharma-Shikhar Dhawan

ಶಿಖರ್ ಧವನ್

Posted By : Srinivasamurthy VN
Source : Online Desk

ನವದೆಹಲಿ: ಕ್ರಿಕೆಟಿಗ ಶಿಖರ್ ಧವನ್ ಕುರಿತಂತೆ ರೋಹಿತ್ ಶರ್ಮಾ ಮಾಡಿರುವ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿಯ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಮೂರನೇ ಟಿ20 ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ.

ಧರ್ಮಶಾಲಾದಿಂದ ಬೆಂಗಳೂರಿಗೆ ಆಗಮಿಸುವ ವೇಳೆ ವಿಮಾನದಲ್ಲಿ ಶಿಖರ್ ಧವನ್ ರ ಅವಸ್ಥೆಯನ್ನು ನೋಡಿದ ರೋಹಿತ್ ಶರ್ಮಾ ಅದನ್ನು ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಧವನ್ ಒಬ್ಬೊರೇ ಮಾತನಾಡುತ್ತಿದ್ದಾರೆ. ಆರಂಭದಲ್ಲಿ ಧವನ್ ರೋಹಿತ್ ರೊಂದಿಗೆ ಮಾತನಾಡುತ್ತಿರ ಬಹುದು ಎಂದು ಭಾವಿಸಬಹುದು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರೋಹಿತ್ ಶರ್ಮಾ ಧವನ್ ನನ್ನೊಂದಿಗೆ ಮಾತನಾಡುತ್ತಿಲ್ಲ. ಆತ ತಾನೊಬ್ಬನೇ ಮಾತನಾಡಿಕೊಳ್ಳುತ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

width=100%

ಇನ್ನು ಈ ವಿಡಿಯೋವನ್ನು ರೋಹಿತ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ವಿಡಿಯೋಗೆ ಯುವರಾಜ್ ಸಿಂಗ್ ನಗುವಿನ ಚಿನ್ಹೆ ಹಾಕಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ಇನ್ನು ಈ ವಿಡಿಯೋಗೆ ಧವನ್ ಕೂಡ ಸ್ಪಷ್ಟನೆ ನೀಡಿದ್ದು, ನಾನು ಶಾಯರಿವೊಂದನ್ನು ಅಭ್ಯಾಸ ಮಾಡುತ್ತಿದ್ದೆ. ಅದನ್ನು ರೋಹಿತ್ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾರೆ.

facebook twitter whatsapp