ತ್ರಿಕೋನ ಸರಣಿ ಫೈನಲ್‍ಗೆ ರಶೀದ್ ಖಾನ್ ಅನುಮಾನ

ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತ್ರಿಕೋನ ಸರಣಿಯ ಫೈನಲ್ ಹಣಾಹಣಿಗೆ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. 

Published: 22nd September 2019 05:05 PM  |   Last Updated: 22nd September 2019 05:05 PM   |  A+A-


Rashid Khan in doubt for T20I tri-series final

ತ್ರಿಕೋನ ಸರಣಿ ಫೈನಲ್‍ಗೆ ರಶೀದ್ ಖಾನ್ ಅನುಮಾನ

Posted By : Srinivas Rao BV
Source : UNI

ದುಬೈ: ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತ್ರಿಕೋನ ಸರಣಿಯ ಫೈನಲ್ ಹಣಾಹಣಿಗೆ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. 

ಎಡಗಾಲು ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ರಶೀದ್ ಖಾನ್ ಸಂಪೂರ್ಣ ಗುಣಮುಖರಾಗಲು ಇನ್ನೂ ಎರಡು ಮೂರು ದಿನಗಳ ಅಗತ್ಯವಿದೆ ಎಂದು ತಂಡದ ವ್ಯವಸ್ಥಾಪಕ ನಾಜೀಮ್ ಜಾರ್ ಅಬ್ದೂರ್ ಝಾಯ್ ಹೇಳಿದ್ದಾರೆ.

"ತ್ರಿಕೋನ ಸರಣಿಯ ಫೈನಲ್‍ಗೆ ಅವರು ಲಭ್ಯರಾಗುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ. ಮುಂದೇನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಅವರಿನ್ನೂ ಗುಣಮುಖರಾಗಲು ಎರಡರಿಂದ ಮೂರು ದಿನಗಳ ಅಗತ್ಯವಿದೆ ಎಂದು ಅವರು ಹೇಳಿರುವುದನ್ನು ಐಸಿಸಿ ವರದಿ ಮಾಡಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp