ಬೆಂಗಳೂರಿನಲ್ಲಿ 3ನೇ ಟಿ20 ಪಂದ್ಯ: ಮತ್ತೇ ಅಗ್ರ ಸ್ಥಾನಕ್ಕೇರಲು ರೋಹಿತ್‍ಗೆ 8 ರನ್ ಅಗತ್ಯ

ಚುಟುಕು ಕ್ರಿಕೆಟ್ ನಲ್ಲಿ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತೆ ಅಗ್ರ ಸ್ಥಾನಕ್ಕೇರಲು ಮತ್ತೊಂದು ಅವಕಾಶ ಲಭಿಸಿದ್ದು, ಕೇವಲ 8 ರನ್ ಗಳಿಸಿದರೆ ಟಿ20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚುಟುಕು ಕ್ರಿಕೆಟ್ ನಲ್ಲಿ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತೆ ಅಗ್ರ ಸ್ಥಾನಕ್ಕೇರಲು ಮತ್ತೊಂದು ಅವಕಾಶ ಲಭಿಸಿದ್ದು, ಕೇವಲ 8 ರನ್ ಗಳಿಸಿದರೆ ಟಿ20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಮೂರನೇ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಎಂಟು ರನ್ ಗಳಿಸಿದ್ದೇ ಆದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಚುಟುಕು ಕ್ರಿಕಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸಮನ್ ಎಂಬ ಸಾಧನೆಗೆ ಮತ್ತೇ ಭಾಜನರಾಗಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊಹಾಲಿಯಲ್ಲಿ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ನಾಯಕ ವಿರಾಟ್ ಅಜೇಯ 72 ರನ್ ಗಳಿಸುವ ಮೂಲಕ ಭಾರತ ಟಿ-20 ಕ್ರಿಕೆಟ್‍ನಲ್ಲಿ 2,441 ರನ್ ಗಳಿಸಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿಸಿದ್ದರು. ಈ ಪಂದ್ಯದಲ್ಲಿ ಭಾರತ ಏಳೂ ವಿಕೆಟ್‍ಗಳಿಂದ ಜಯ ಸಾಧಿಸಿತ್ತು. ಜತೆಗೆ, 1-0 ಮುನ್ನಡೆ ಕಾಯ್ದುಕೊಂಡಿತ್ತು.

ಪ್ರಸ್ತುತ ರೋಹಿತ್ ಶರ್ಮಾ 89 ಟಿ-20 ಪಂದ್ಯಗಳಿಂದ ಒಟ್ಟು 2,434 ರನ್ ಗಳಿಸಿದ್ದಾರೆ. ಇಂದು ಪಂದ್ಯದಲ್ಲಿ ಎಂಡು ರನ್‍ಗಿಂತ ಹೆಚ್ಚು ರನ್ ಗಳಿಸಿದರೆ ಮತ್ತೇ ಟಿ-20 ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಆಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com