ರಾಜ್ಯಗಳ ಕ್ರಿಕೆಟ್ ಲೀಗ್ ಪರ ಸುನೀಲ್ ಗವಾಸ್ಕರ್ ಬ್ಯಾಟಿಂಗ್!

ಇತ್ತೀಚಿನ ದಿನಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಆರೋಪ ಕೇಳಿಬಂದರೂ  ಕರ್ನಾಟಕ ಪ್ರೀಮಿಯರ್ ಲೀಗ್, ತಮಿಳುನಾಡು ಪ್ರೀಮಿಯರ್ ಲೀಗ್ ನಂತಹ ರಾಜ್ಯಮಟ್ಟದಲ್ಲಿನ ಲೀಗ್ ಗಳ ಬಗ್ಗೆ ಕ್ರಿಕೆಟ್ ಲಿಜೆಂಡ್ ಸುನೀಲ್ ಗವಾಸ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

Published: 22nd September 2019 12:05 PM  |   Last Updated: 22nd September 2019 12:05 PM   |  A+A-


SunilGavaskhar

ಸುನೀಲ್ ಗವಾಸ್ಕರ್

Posted By : Nagaraja AB
Source : The New Indian Express

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಆರೋಪ ಕೇಳಿಬಂದರೂ  ಕರ್ನಾಟಕ ಪ್ರೀಮಿಯರ್ ಲೀಗ್, ತಮಿಳುನಾಡು ಪ್ರೀಮಿಯರ್ ಲೀಗ್ ನಂತಹ ರಾಜ್ಯಮಟ್ಟದಲ್ಲಿನ ಲೀಗ್ ಗಳ ಬಗ್ಗೆ ಕ್ರಿಕೆಟ್ ಲಿಜೆಂಡ್ ಸುನೀಲ್ ಗವಾಸ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂತಹ ಟೂರ್ನಿಗಳನ್ನು ಆಯೋಜಿಸುವುದರಿಂದ ಜಿಲ್ಲಾಮಟ್ಟದಲ್ಲಿನ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಿದೆ. ಕೆಪಿಎಲ್  ಹಾಗೂ ಟಿಎನ್ ಪಿಎಲ್ ನ್ನು ಉದಾಹರಣೆಗೆ ತೆಗೆದುಕೊಂಡರೆ ಅನೇಕ ಮಂದಿ ಪ್ರತಿಭಾವಂತ ಆಟಗಾರರು ಮುನ್ನೆಲೆಗೆ ಬಂದಿದ್ದಾರೆ.ಇದರಿಂದಾಗಿ ಭಾರತೀಯ ಕ್ರಿಕೆಟ್ ಗೆ ಅನೇಕ ಪ್ರತಿಭಾವಂತ ಆಟಗಾರರು ಸಿಗಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವರು ಬಡತನದ ಹಿನ್ನೆಲೆಯಿಂದ ಬಂದಿರುತ್ತಾರೆ. ಅಂತಹವರು ದಿಢೀರನ್ನೆ ಆಗಾದ ಪ್ರಮಾಣದ ಹಣ ನೋಡುತ್ತಾರೆ. ಆದರೆ, ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದಂತೆ ಅಂತಹ ಆಟಗಾರರಿಗೆ ಶಿಕ್ಷಣ ನೀಡಬೇಕಾಗಿದೆ ಎಂದು ಸುನೀಲ್ ಗವಾಸ್ಕರ್ ಕೆಲವೊಂದು ಎಚ್ಚರಿಕೆ ಮಾತುಗಳನ್ನಾಡಿದ್ದಾರೆ. 

ತಮಿಳುನಾಡು ಕ್ರಿಕೆಟ್ ಲೀಗ್ ಹಾಗೂ ಕರ್ನಾಟಕ ಕ್ರಿಕೆಟ್ ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು.  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರರೊಬ್ಬರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. 

ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಎಲ್ ತಂಡದ ಬೆಳವಾಗಿ ಪ್ಯಾಂಥರ್ಸ್ ನ ಅಲಿ ಅಸ್ಪಾಕ್ ತಾರಾ ಅವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಪ್ರಶ್ನಿಸಿದಾಗ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp