ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಶೊಯೆಬ್ ಮಲ್ಲಿಕ್ ದಾಖಲೆ ಮುರಿದ ಮಿಲ್ಲರ್!
ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್ ಚುಟುಕು ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಶೊಯೆಬ್ ಮಲ್ಲಿಕ್ ಅವರ ದಾಖಲೆಯನ್ನು ಸರಿ ಗಟ್ಟಿದರು.
Published: 23rd September 2019 08:26 PM | Last Updated: 23rd September 2019 08:26 PM | A+A A-

ಡೇವಿಡ್ ಮಿಲ್ಲರ್-ಕೊಹ್ಲಿ
ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್ ಚುಟುಕು ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಶೊಯೆಬ್ ಮಲ್ಲಿಕ್ ಅವರ ದಾಖಲೆಯನ್ನು ಸರಿ ಗಟ್ಟಿದರು.
ಭಾನುವಾರ ನಡದ ಪಂದ್ಯದಲ್ಲಿ ಭಾರತ ನೀಡಿದ್ದ 135 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 16.5 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಮೂರು ಪಂದ್ಯಗಳ ಟಿ-20 ಸರಣಿಯನ್ನು ಸಮಬಲ ಸಾಧಿಸಿತು. ಈ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಡೇವಿಡ್ ಮಿಲ್ಲರ್ ಹಿಡಿಯುವ ಮೂಲಕ 50 ಕ್ಯಾಚ್ ಗಳನ್ನು 72 ಪಂದ್ಯಗಳಿಂದ ಪೂರೈಸಿದರು. ಪಾಕಿಸ್ತಾನ ತಂಡದ ಶೊಯೆಬ್ ಮಲ್ಲಿನ್ 111 ಪಂದ್ಯಳಿಂದ 72 ಕ್ಯಾಚ್ ಗಳನ್ನು ಹಿಡಿದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎ.ಬಿ ಡೆವಿಲಿಯರ್ಸ್ 44 ಕ್ಯಾಚ್ ಹಾಗೂ ನ್ಯೂಜಿಲೆಂಡ್ ತಂಡದ ರಾಸ್ ಟೇಲರ್ 44 ಹಾಗೂ ಭಾರತದ ಸುರೇಶ್ ರೈನಾ 42 ಕ್ಯಾಚ್ ಹಿಡಿದು ನಂತರದ ಸ್ಥಾನಗಳಲ್ಲಿ ಇದ್ದಾರೆ.