ಪಂದ್ಯದ ವೇಳೆ ಅನುಚಿತ ವರ್ತನೆ: ಕ್ಯಾಪ್ಟನ್ ಕೊಹ್ಲಿಗೆ ಐಸಿಸಿ ವಾರ್ನಿಂಗ್, ಅಂಕ ಕಡಿತ

 ಐಸಿಸಿ ನಿಯಮಗಳನ್ನು ಗಾಳಿಗೆ ತೂರಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಖಡಕ್ ಎಚ್ಚರಿಕೆ ನೀಡಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಬೆಂಗಳೂರು:  ಐಸಿಸಿ ನಿಯಮಗಳನ್ನು ಗಾಳಿಗೆ ತೂರಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಖಡಕ್ ಎಚ್ಚರಿಕೆ ನೀಡಿದೆ.

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೆ ಹಾಗೂ ಕೊನೆಯ ಟ್ವಿ-20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನವನ್ನು ನೀಡಿ ಭಾರತ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಈ ಪಂದ್ಯವನ್ನು ಗೆದ್ದು ಭಾರತ ಸರಣಿಯನ್ನು ವಶಪಡಿಸಿಕೊಳ್ಳುವ ಕನಸಿಗೆ ಡಿಕಾಕ್ ಪಡೆ ಶಾಕ್‌ ನೀಡಿತು. ಪರಿಣಾಮ ಸರಣಿ ಸಮಬಲದಲ್ಲಿ ಅಂತ್ಯವಾಯಿತು.

ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ 2.1 2 ಕಲಂ ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿಸಿದೆ. ಭಾರತದ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ರನ್‌ ಕದಿಯಲು ಓಡುವಾಗ ಕೊಹ್ಲಿ, ಹೆಂಡ್ರಿಕ್ಸ್‌ಗೆ ತಾಗಿದ್ದರು. ಕೊಹ್ಲಿ ಆ ವೇಳೆ ನಡೆದುಕೊಂಡ ರೀತಿ ಐಸಿಸಿಗೆ ಸರಿ ಕಾಣಿಸಿಲ್ಲ. ಹೀಗಾಗಿ ಐಸಿಸಿ ಅಂಕವನ್ನು ಕಡಿತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com