ಪಂತ್ ಗೆ 5 ಅಥವಾ 6ನೇ ಕ್ರಮಾಂಕ ನೀಡಿ: ವಿವಿಎಸ್ ಲಕ್ಷ್ಮಣ್ 

ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ  ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಶ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಮೊದಲಿನಂತೆ ಕೆಳ ಕ್ರಮಾಂಕದಲ್ಲಿ ಸ್ವತಂತ್ರವಾಗಿ ಆಡಲು ಬಿಡಿ ಎಂದು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ.

Published: 23rd September 2019 11:59 AM  |   Last Updated: 23rd September 2019 11:59 AM   |  A+A-


collectionphoto

ಸಂಗ್ರಹ ಚಿತ್ರ

Posted By : Nagaraja AB
Source : UNI

ನವದೆಹಲಿ:ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ  ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಶ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಮೊದಲಿನಂತೆ ಕೆಳ ಕ್ರಮಾಂಕದಲ್ಲಿ ಸ್ವತಂತ್ರವಾಗಿ ಆಡಲು ಬಿಡಿ ಎಂದು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ.

ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬ್ಯಾಟ್ಸ್ ಮನ್  ವಿಫಲರಾದ ಬಳಿಕ ರಿಷಭ್ ಪಂತ್ ಗೆ ನೀಡಲಾಗಿತ್ತು. ಆದರೆ, ಅವರು ಕೂಡಾ ಸೀಮಿತ ಓವರ್ ಗಳ ಪಂದ್ಯದಲ್ಲಿ ಕಳಪೆ ಶಾಟ್ ಆಯ್ಕೆ ಮಾಡಿಕೊಳ್ಳುತ್ತಿದ್ದರ ಪರಿಣಾಮ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ.

ಸ್ವಾಭಾವಿಕವಾಗಿ ರಿಷಭ್ ಪಂತ್ ಅವರದೂ ಆಕ್ರಮಣಕಾರಿ ಬ್ಯಾಟಿಂಗ್ ಕಳೆದ ಐಪಿಎಲ್  ಆವೃತ್ತಿಯಲ್ಲಿ ಪಂತ್ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಸರಾಸರಿ 45 ರಷ್ಟು ಯಶ ಸಾಧಿಸಿದ್ದರು. ಆದರೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದೇ ಲಯದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ ಎಂದು ವಿವಿಎಸ್ ಲಕ್ಷ್ಮಣ್  ತಿಳಿಸಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ ಮನ್ ಆಗಿದ್ದಾರೆ ಎಂದು  ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp