ವಿಶ್ವಕಪ್ ಬಳಿಕ ಎಂಎಸ್ ಧೋನಿ ಬ್ಯಾಟ್ ಹಿಡಿಯದಿರಲು ಕಾರಣ ಬಹಿರಂಗ!

ಐಸಿಸಿ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಿಲ್ಲ. ಅದು ಯಾಕೆ ಎಂಬುದು ಇದೀಗ ಬಹಿರಂಗಗೊಂಡಿದೆ.
ಎಂಎಸ್ ಧೋನಿ
ಎಂಎಸ್ ಧೋನಿ

ಮುಂಬೈ: ಐಸಿಸಿ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಿಲ್ಲ. ಅದು ಯಾಕೆ ಎಂಬುದು ಇದೀಗ ಬಹಿರಂಗಗೊಂಡಿದೆ.

ವಿಶ್ವಕಪ್ ಬಳಿಕ ನಡೆದ ವೆಸ್ಟ್ ಇಂಡಿಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೂರ್ನಿಗಳಿಗೂ ಎಂಎಸ್ ಧೋನಿ ಅಲಭ್ಯರಾಗಿದ್ದರು. ವಿಶ್ವಕಪ್ ಬಳಿಕ ಎಂಎಸ್ ಧೋನಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಮೈದಾನಕ್ಕೆ ರೀ ಎಂಟ್ರಿ ಆಗುತ್ತಾರೆ ಎಂದು ಹೇಳಲಾಗಿತ್ತು. 

ಆ ಸೇವೆಯೂ ಮುಗಿದು ತಿಂಗಳೇ ಕಳೆಯುತ್ತಾ ಬಂದರೂ ಧೋನಿ ಆಯ್ಕೆ ಬಗ್ಗೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ. ಬಿಸಿಸಿಐ ಸಹ ಸೆ. 21ಕ್ಕೆ ಧೋನಿ ವಿಶ್ರಾಂತಿ ತೆಗೆದುಕೊಂಡಿದ್ದ ಅವಧಿ ಮುಗಿಯುತ್ತದೆ ಎಂದು ಹೇಳಿತ್ತು. ಇದೀಗ ಆ ಗಡವು ಮುಗಿದಿದೆ. ಆದರೆ ಧೋನಿ ಇನ್ನಷ್ಟು ದಿನ ವಿಶ್ರಾಂತಿ ಪಡೆಯಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಬಾಂಗ್ಲಾ ವಿರುದ್ಧದ ಸರಣಿಗೂ ಅಲಭ್ಯವಾಗುವ ಸಾಧ್ಯತೆ ಇದೆ.

ಇದರ ಮಧ್ಯೆ ಧೋನಿ ಅಭಿಮಾನಿಗಳಲ್ಲಿ ತಮ್ಮ ಕ್ರಿಕೆಟ್ ದೇವರು ಇಷ್ಟೊಂದು ವಿಶ್ರಾಂತಿ ಪಡೆಯುತ್ತಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಇದಕ್ಕೆ ಹೀಗ ಉತ್ತರ ಸಿಕ್ಕಿದೆ. ಎಂಎಸ್ ಧೋನಿ ಗಾಯದಿಂದ ಬಳಲುತ್ತಿದ್ದಾರೆ ಎಂದು.

ಎಂಎಸ್ ಧೋನಿ ಮಣಿಕಟ್ಟು ಗಾಯದ ತೊಂದರೆಯಿಂದ ಬಳಲುತ್ತಿದ್ದು ಇದರಿಂದಾಗಿ ಅವರು ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್ನು ಧೋನಿ ನವೆಂಬರ್ ಅಂತ್ಯದಲ್ಲಿ ಟೀಂ ಇಂಡಿಯಾ ಸೇರಲಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com