ಎನ್. ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥನ್ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷೆ?

ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ಚುನಾವಣೆಗೆ ಸುಪ್ರೀಂ ಕೋರ್ಟ್‌ ಆದೇಶ ಅನುವು ಮಾಡಿದ್ದು, ಮಾಜಿ ಬಿಸಿಸಿಐ ಆಧ್ಯಕ್ಷ ಎನ್. ಶ್ರೀನಿವಾಸನ್ ಪುತ್ರಿ ರೂಪ್ ಗುರುನಾಥನ್ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ರೂಪಾ ಗುರುನಾಥನ್
ರೂಪಾ ಗುರುನಾಥನ್

ಚೆನ್ನೈ: ತಮಿಳುನಾಡು ಕ್ರಿಕೆಟ್‌ ಸಂಸ್ಥೆ (ಟಿಎನ್‌ಸಿಎ) ಚುನಾವಣೆಗೆ ಸುಪ್ರೀಂ ಕೋರ್ಟ್‌ ಆದೇಶ ಅನುವು ಮಾಡಿದ್ದು, ಮಾಜಿ ಬಿಸಿಸಿಐ ಆಧ್ಯಕ್ಷ ಎನ್. ಶ್ರೀನಿವಾಸನ್ ಪುತ್ರಿ ರೂಪ್ ಗುರುನಾಥನ್ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ತಮಿಳುನಾಡು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ, ರೂಪಾ ಗುರುನಾಥನ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ರೂಪಾ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅಧಿಕೃತ ಪ್ರಕಟಣೆ ಒಂದೇ ಬಾಕಿ ಉಳಿದಿದೆ, 

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ರೂಪಾ ಪತಿ ಗುರುನಾಥ್ ಮೇಯಪ್ಪನ್ ಅವರನ್ನು ಅಜೀವ ಪರ್ಯಂತ ನಿಷೇಧಿಸಲಾಗಿದೆ. 

ಇನ್ನೂ ತಮಿಳುನಾಡು ಕ್ರಿಕೆಟ್ ಅಸೋಸಿಯೇನ್ ಅಧ್ಯಕ್ಷ ಸ್ಥಾನಕ್ಕೆ ರುಪಾ ಗುರುನಾಥ್, ಉಪಾಧ್ಯಕ್ಷ ಸ್ಥಾನಕ್ಕೆ ಟಿಜೆ ಶ್ರೀನಿವಾಸರಾಜ್ ಹಾಗೂ ಪಿ.ಅಶೋಕ್ ಸಿಗ್ಮಾನಿ, ಕಾರ್ಯದರ್ಶಿ ಹುದ್ದೆಗೆ ಆರ್ ಎಸ್ ರಾಮಸ್ವಾಮಿ, ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗೆ ಎನ್. ವೆಂಕಟರಮಣ್ ಹಾಗೂ ಖಜಾಂಚಿ ಹುದ್ದೆಗೆ ಜೆ. ಪಾರ್ಥಸಾರಥಿ ನಾಮಪತ್ರ ಸಲ್ಲಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com