ಬಗ್ಗುವುದಕ್ಕೆ ಆಗದೆ ರನ್ಔಟ್ ಆದ ವಿಶ್ವದ ದೈತ್ಯ ಕ್ರಿಕೆಟಿಗ, ವಿಡಿಯೋ ವೈರಲ್!

ಜಗತ್ತಿನ ದೈತ್ಯ ಕ್ರಿಕೆಟಿಗ ನಡು ಬಗ್ಗಿಸಲಾಗದೆ ರನ್ ಔಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ರಕೀಮ್ ಕಾರ್ನವಾಲ್
ರಕೀಮ್ ಕಾರ್ನವಾಲ್

ಜಗತ್ತಿನ ದೈತ್ಯ ಕ್ರಿಕೆಟಿಗ ನಡು ಬಗ್ಗಿಸಲಾಗದೆ ರನ್ ಔಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೆಸ್ಟ್ ತಂಡದ ಕ್ರಿಕೆಟಿಗ 26 ವರ್ಷದ ರಕೀಮ್ ಕಾರ್ನವಾಲ್ ಸದ್ಯ ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಸೆಂಟ್ ಲೂಸಿಯಾ ಝೂಕ್ಸ್ ಪರ ಆಡುತ್ತಿದ್ದಾರೆ. ಇನ್ನು ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕಾರ್ನವಾಲ್ ಬೌಂಡರಿ ಹೊಡೆಯಲು ತಿಣುಕಾಡುತ್ತಿದ್ದರು. 12 ಎಸೆತದಲ್ಲಿ ಕೇವಲ 6 ರನ್ ಗಳಿಸಿದ್ದರು. 

ಸ್ಟ್ರೈಕ್ ನಲ್ಲಿದ್ದ ಇನ್ಗ್ರಾಮ್ ಬಿರುಸಿನ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಚೆಂಡು ಲೇಗ್ ಆಪ್ ನಲ್ಲಿ ಹೋಗಿತ್ತು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕಾರ್ನವಾಲ್ ಸ್ಟ್ರೈಕ್ ಕಡೆ ಓಡುತ್ತಿದ್ದರು. ಫೀಲ್ಡರ್ ನೇರವಾಗಿ ವಿಕೆಟ್ ಕೀಪರ್ ಚೆಂಡನ್ನು ಎಸೆದಿದ್ದರು. ಚೆಂಡನ್ನು ಹಿಡಿದ ಕೀಪರ್ ಸ್ಟಂಪ್ ಗೆ ಹೊಡೆದಿದ್ದರು. 

ವೇಗವಾಗಿ ಓಡಿ ಬಂದಿದ್ದ ಕಾರ್ನವಾಲ್ ಬ್ಯಾಟ್ ಕ್ರೀಸ್ ನೊಳಗಿತ್ತು. ಆದರೆ ದೈತ್ಯಕಾರದ ಕಾರ್ನವಾಲ್ ಬ್ಯಾಟ್ ನೆಲಕ್ಕೆ ಮುಟ್ಟಿಸಲು ಸಾಧ್ಯವಾಗದೇ ಹೋಗಿದ್ದರಿಂದ ರನ್ ಔಟ್ ಆಗಿದ್ದಾರೆ. ರಕೀಮ್ ರನ್ ಔಟ್ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com