ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದರೂ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ: ಯುವರಾಜ್ ಸಿಂಗ್

ಕಳೆದ 2017ರಲ್ಲಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದರೂ ಭಾರತ ತಂಡಕ್ಕೆ ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿತ್ತು ಎಂದು ಟೀಮ್ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ನವದೆಹಲಿ: ಕಳೆದ 2017ರಲ್ಲಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದರೂ ಭಾರತ ತಂಡಕ್ಕೆ ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿತ್ತು ಎಂದು ಟೀಮ್ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2011ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತ ಯುವರಾಜ್ ಸಿಂಗ್ ಅವರನ್ನು 2017ರ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಕೈ ಬಿಡಲಾಗಿತ್ತು. ಇದಕ್ಕೂ ಮುನ್ನ ಅವರು 2007ರ ಉದ್ಘಾಟನಾ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ಅಮೋಘ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಹಾಗೂ ಚುಟುಕು ಕ್ರಿಕೆಟ್‍ನಲ್ಲಿ ಅತಿ ವೇಗದ ಅರ್ಧ ಶತಕ ಸಿಡಿಸಿ ಎರಡು ದಾಖಲೆ ಮಾಡಿದ್ದರು.

2017ರ ಚಾಂಪಿಯನ್ ಟ್ರೋಫಿಯಲ್ಲಿ ಎರಡು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದೆ. ಆದಾಗ್ಯೂ, ನನ್ನನ್ನು ತಂಡದಿಂದ ಕೈ ಬಿಟ್ಟಿದ್ದರು. ಆ ವೇಳೆ ಗಾಯಾಳಾಗಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ತಯಾರಿ  ನಡೆಸುವುದಾಗಿ ತಿಳಿಸಿದ್ದೆ. ನಂತರ, ತಕ್ಷಣ ಯೋ-ಯೋ ಫಿಟ್ನೆಸ್ ಟೆಸ್ಟ್ ಪರಿಚಯ ಮಾಡಿಸಲಾಯಿತು. ಇದು ನನ್ನ ಆಯ್ಕೆ ವಿಚಾರದಲ್ಲಿ ಯೂ-ಟರ್ನ್ ಆಯಿತು. ಅತಿ ಶೀಘ್ರದಲ್ಲೇ ನಾನು ಯೋ-ಯೋ ಟೆಸ್ಟ್‍ಗೆ ತಯಾರಿ ನಡೆಸಬೇಕಾಗಿತ್ತು ಎಂದರು.

" ಈ ವಯಸ್ಸಿನಲ್ಲೂ ಯುವರಾಜ್ ಸಿಂಗ್ ಯೋ-ಯೋ ಟೆಸ್ಟ್ ಪಾಸ್ ಮಾಡುತ್ತಾರೆಂದು ಆಯ್ಕೆದಾರರು ನಿರೀಕ್ಷೆ ಮಾಡಿರಲಿಲ್ಲ. ಆದರೆ, ತಾನು ಯೋ-ಯೋ ಟೆಸ್ಟ್ ಕೂಡ ಪಾಸ್ ಮಾಡಿದ್ದೆ. ನಂತರ, ತಾನೇ ದೇಶೀಯ ಕ್ರಿಕೆಟ್ ಆಡುವುದಾಗಿ ತಿಳಿಸಿದ್ದೆ ಎಂದರು.

15 ರಿಂದ 17 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿರುವ ಆಟಗಾರನನ್ನು ಕುಳಿತುಕೊಳ್ಳಿ ಅಥವಾ ಮಾತನಾಡಲು ಸಾಧ್ಯವಾಗದೆ ಇರುವ ಪರಿಸ್ಥಿತಿ ದುರಾದೃಷ್ಟಕರ. ಈ ಬಗ್ಗೆ ಯಾರೂ ನನಗೆ ಹೇಳಲೇ ಇಲ್ಲ. ಜತೆಗೆ, ವಿರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ಅವರಿಗೂ ಹೇಳಿರಲಿಲ್ಲ ಎಂದು ಹಿಂದಿನ ಕಹಿ ಘಟನೆಗಳನ್ನು ಯುವಿ ಮೆಲುಕು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com