ಮತ್ತೊಬ್ಬ 'ಮಲಿಂಗಾ' ಅಖಾಡಕ್ಕೆ: ತರಗೆಲೆಯಂತೆ ಉದುರಿದ ಬ್ಯಾಟ್ಸ್‌ಮನ್‌ಗಳು, ವಿಡಿಯೋ ನೋಡಿ ದಂಗಾಗ್ತೀರಾ?

ಕ್ರಿಕೆಟ್ ಜಗತ್ತಿನಲ್ಲಿ ಒಬ್ಬರಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ಶೈಲಿ ಹೊಂದಿರುವುದು ತುಂಬಾ ಕಡಿಮೆ. ಆದರೆ ಇಲ್ಲೊಬ್ಬ ಯುವ ವೇಗಿ ಥೇಟ್ ಶ್ರೀಲಂಕಾ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ರೀತಿ ಬೌಲಿಂಗ್ ಮಾಡುವುದು ಅಲ್ಲದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.
ಮತೀಶ್
ಮತೀಶ್

ಕೊಲಂಬೋ: ಕ್ರಿಕೆಟ್ ಜಗತ್ತಿನಲ್ಲಿ ಒಬ್ಬರಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ಶೈಲಿ ಹೊಂದಿರುವುದು ತುಂಬಾ ಕಡಿಮೆ. ಆದರೆ ಇಲ್ಲೊಬ್ಬ ಯುವ ವೇಗಿ ಥೇಟ್ ಶ್ರೀಲಂಕಾ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ರೀತಿ ಬೌಲಿಂಗ್ ಮಾಡುವುದು ಅಲ್ಲದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.

ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಲಸಿತ್ ಮಲಿಂಗಾ ಇದೀಗ ಟಿ20 ಕ್ರಿಕೆಟ್ ಗೂ ವಿದಾಯ ಹೇಳುವ ಯೋಚನೆಯಲ್ಲಿದ್ದಾರೆ. ಈ ಮಧ್ಯೆ ಲಂಕಾದಲ್ಲೇ ಮತ್ತೊಬ್ಬ ಮಲಿಂಗಾ ಹುಟ್ಟಿಕೊಂಡಿದ್ದಾನೆ. 

17 ವರ್ಷದ ಮತೀಶ್ ಪತಿರನಾ ಥೇಟ್ ಮಲಿಂಗಾ ರೀತಿ ಬೌಲಿಂಗ್ ಮಾಡಿ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಟ್ರಿನಿಟಿ ಕಾಲೇಜು ತಂಡದ ಪರ ಆಡಿದ ಮತೀಶ್ ಪತಿರನಾ ತಮ್ಮ ಯಾರ್ಕರ್ ಬೌಲಿಂಗ್ ನಿಂದ ವಿಕೆಟ್ ಗಳನ್ನು ಕಿತ್ತು ಬೀಗಿದ್ದಾರೆ.

ಮತೀಶ್ ಪಂದ್ಯವೊಂದರಲ್ಲಿ ಕೇವಲ 7 ರನ್ ಗೆ 6 ವಿಕೆಟ್ ಪಡೆದು ಮಿಂಚಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುನಿಯರ್ ಮಲಿಂಗಾ ಅಂತ ಫೇಮಸ್ ಆಗಿರುವ ಮತೀಶ್ ಇದೀಗ ಲಂಕಾ ಅಂಡರ್-19 ತಂಡದ ದೇಶೀಯ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com