ನಿಂತ ನೀರಿನ ಪಿಚ್'ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದ ಕ್ರಿಕೆಟ್ ಮಾಂತ್ರಿಕ ಸಚಿನ್: ವಿಡಿಯೋ ವೈರಲ್

ಕ್ರಿಕೆಟ್ ಮಾಂತ್ರಿಕ, ಭಾರತದ ಕ್ರಿಕೆಟ್'ನ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಕಿಚ್ಚು ಹೊತ್ತಿಸಿದ್ದಾರೆ. 
ನಿಂತ ನೀರಿನ ಪಿಚ್'ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದ ಕ್ರಿಕೆಟ್ ಮಾಂತ್ರಿಕ ಸಚಿನ್
ನಿಂತ ನೀರಿನ ಪಿಚ್'ನಲ್ಲೇ ಬ್ಯಾಟಿಂಗ್ ಅಭ್ಯಾಸ ಮಾಡಿದ ಕ್ರಿಕೆಟ್ ಮಾಂತ್ರಿಕ ಸಚಿನ್

ಮುಂಬೈ: ಕ್ರಿಕೆಟ್ ಮಾಂತ್ರಿಕ, ಭಾರತದ ಕ್ರಿಕೆಟ್'ನ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಕಿಚ್ಚು ಹೊತ್ತಿಸಿದ್ದಾರೆ. 

ಹ್ಯಾಷ್ ಟ್ಯಾಗ್ ಫ್ಳ್ಯಾಷ್'ಬ್ಯಾಕ್ ಫ್ರೈಡೇ ಮೂಲಕ ಜಲಾವೃತ್ತಗೊಂಡಿರುವ ಪಿಚ್'ನಲ್ಲಿ ಸಚಿನ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತೆಂಡೂಲ್ಕರ್ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. 

'ಆಟದ ಮೇಲಿನ ಒಲವು ಮತ್ತು ಉತ್ಸಾಹ ಸದಾ ಅಭ್ಯಾಸಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಡುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನೀವು ಏನು ಮಾಡುತ್ತಿರುವಿರೋ ಅದನ್ನು ಆನಂದಿಸುವುದು ಮುಖ್ಯ. #FlashbackFriday' ಎಂದು ಬರೆಯುವ ಮೂಲಕ ಸಚಿನ್ ಅವರು ವಿಡಿಯೋ ಶೇರ್ ಮಾಡಿದ್ದಾರೆ. 

ವಿಡಿಯೋದಲ್ಲಿ ಸಚಿನ್ ಅವರು, ಟೀಮ್ ಇಂಡಿಯಾದ ಅಭ್ಯಾಸದ ಜರ್ಸಿ ತೊಟ್ಟಿದ್ದು, ಸಂಪೂರ್ಣವಾಗಿ ಜಲಾವೃತ್ತಗೊಂಡಿರುವ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ರಬ್ಬರ್ ಚೆಂಡನ್ನು ಹಿಡಿದ ಹುಡುಗರು ಹತ್ತಿರದಿಂದ ಚೆಂಡನ್ನು ಜೋರಾಗಿ ಎಸೆಯುತ್ತಿದ್ದು, ಶಾರ್ಟ್ ಪಿಚ್ ಎಸೆತಗಳ ಕಡೆಗೆ ಗಮನ ನೀಡಿ, ತೆಂಡೂಲ್ಕರ್ ಬ್ಯಾಟ್ ಬೀಸುತ್ತಿರುವುದು ಕಂಡು ಬಂದಿದೆ. 

ವಿದೇಶದಲ್ಲಿನ ವೇಗದ ಮತ್ತು ಬೌನ್ಸಿ ಪಿಚ್ ಗಳಲ್ಲಿ ಬ್ಯಾಟಿಂಗ ಸುಲಭನ್ನಾಗಿಸಿಕೊಳ್ಳುವ ಉದ್ದೇಶದಿಂದ ತೆಂಡೂಲ್ಕರ್ ಅವರು ಇಂತಹದ್ದೊಂದು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾಗಿ ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ 1994ರಲ್ಲಿ ಭಾರತ ತಂಡದ ಪರ ನ್ಯೂಜಿಲೆಂಡ್ ನಲ್ಲಿ ಇನ್ನಿಂಗ್ಸ್ ಆರಂಭಿಸಲು ಟೀಮ್ ಮ್ಯಾನೇಜ್ಮೆಂಟ್ ಎದುರು ಅಂಗಲಾಚಿದ್ದ ವಿಚಾರವನ್ನು ಇದೇ ವೇಳೆ ಸಚಿನ್ ಹಂಚಿಕೊಂಡಿದ್ದರು. 

1994ರಲ್ಲಿ ನಾನು ಭಾರತದ ತಂಡದ ಪರ ಇನ್ನಿಂಗ್ಸ್ ಆಡಲು ಆರಂಭಿಸಿದ್ದೆ. ಆ ವೇಳೆ ಎಲ್ಲಾ ತಂಡಗಳು ಮೊದಲಿಗೆ ವಿಕೆಟ್ ಕಾಯ್ದುಕೊಳ್ಳುವ ತಂತ್ರವನ್ನು ಅನುಸರಿಸುತ್ತಿದ್ದವು. ಆದರೆ, ನಾನು ಕೊಂಚ ವಿಭಿನ್ನ ಆಲೋಚನೆ ಮಾಡಿ, ಮೊದಲಿಗೆ ಬೌಲರ್ ಗಳ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದೆ. ಈ ಸಂದರ್ಭದಲ್ಲಿ ಆರಂಭಿಕನಾಗಿ ಆಡುವ ಸಲುವಾಗಿ ತಂಡದ ಮ್ಯಾನೇಜ್ಮೆಂಟ್ ಎದುರು ಅಂಗಲಾಚಿದ್ದೆ. ಇಲ್ಲಿ ವಿಫಲನಾದರೆ, ಮುಂದೆಂದೂ ಈ ರೀತಿ ಕೇಳುವುದಿಲ್ಲ ಎಂದು ಬೇಡಿಕೊಂಡಿದ್ದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com