ಡಕೌಟ್ ಆದ ರೋ'ಹಿಟ್' ಶರ್ಮಾ: ಡ್ರಾನಲ್ಲಿ ಅಂತ್ಯಗೊಂಡ ಅಭ್ಯಾಸ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಿರಿಯ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ಇಂದಿಲ್ಲಿ ಮುಕ್ತಾಯವಾದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಹರಿಣಗಳ ಎದುರು ಶೂನ್ಯಕ್ಕೆೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ವಿಜಯನಗರಂ: ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಿರಿಯ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ಇಂದಿಲ್ಲಿ ಮುಕ್ತಾಯವಾದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಹರಿಣಗಳ ಎದುರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು.

ಇಲ್ಲಿನ  ಡಾ. ಪಿವಿಜಿ ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ದಕ್ಷಿಣ ಆಫ್ರಿಕಾ 68 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಅಧ್ಯಕ್ಷರ ಮಂಡಳಿ ಇಲೆವೆನ್ ತಂಡ 64 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು.

ಮಂಡಳಿ ಅಧ್ಯಕ್ಷರ ಇಲೆವೆನ್ ಪರ ಮಯಾಂಕ್ ಅಗರ್ವಾಲ್ ಜತೆ ಆರಂಭಿಕನಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅವರು ಕೇವಲ ಎರಡನೇ ಎಸೆತದಲ್ಲಿ ವೆರ್ನಾನ್ ಫಿಲೆಂಡರ್ ಅವರ ಎಸೆತದಲ್ಲಿ ಕ್ಲಾಸೆನ್‌ಗೆ ಕ್ಯಾಚ್ ನೀಡಿ ನಿರಾಸೆಯಿಂದ ಹೊರ ನಡೆದರು.

ಆದರೆ, ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಅತ್ಯತ್ತಮ ಬ್ಯಾಟಿಂಗ್ ಮಾಡಿದರು. 92 ಎಸೆತಗಳಲ್ಲಿ 39 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಪ್ರಿಯಾಂಕ್ ಪಾಂಚಲ್ ಅವರು 77 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ 10 ಬೌಂಡರಿಯೊಂದಿಗೆ 60 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ಅವರು 19 ರನ್ ಗಳಿಸಿ ನಿರಾಸೆ ಅನುಭವಿಸಿದರು. ಸಿದ್ದೇಶ್ ಲಾಡ್ 89 ಎಸೆತಗಳಲ್ಲಿ  ಒಂದು ಸಿಕ್ಸ್‌ ಹಾಗೂ ಏಳು ಬೌಂಡರಿಯೊಂದಿಗೆ ಅಜೇಯ 52 ರನ್ ಗಳಿಸಿದರು. ಜತೆಗೆ, ತವರು ನೆಲದ ಲಾಭ ಪಡೆದ ವಿಕೆಟ್ ಕೀಪರ್ ಶ್ರೀಕಾರ್ ಭರತ್ ಸ್ಫೋಟಕ  ಬ್ಯಾಟಿಂಗ್ ಮಾಡಿದರು. 57 ಎಸೆತಗಳನ್ನು ಎದುರಿಸಿದ ಅವರು ಐದು ಸಿಕ್ಸರ್, ಏಳು ಬೌಂಡರಿಯೊಂದಿಗೆ 71 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. 

ಒಟ್ಟಾರೆ, ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ 265 ರನ್ ಗಳಿಸಿತ್ತು. ಇದರೊಂದಿಗೆ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್ ಮೂರು ವಿಕೆಟ್, ವೆರ್ನಾನ್ ಫಿಲೆಂಡರ್ ಎರಡು ವಿಕೆಟ್ ಪಡೆದರು. 

ಇದಕ್ಕೂ ಮುನ್ನ ನಾಲ್ಕು ವಿಕೆಟ್ ಕಳೆದುಕೊಂಡು 199 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ಶನಿವಾರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ತೆಂಬಾ ಬವುಮಾ 127 ಎಸೆತಗಳಲ್ಲಿ ಒಂದು ಸಿಕ್ಸ್‌ 14 ಬೌಂಡರಿಯೊಂದಿಗೆ ಅಜೇಯ 87 ರನ್ ಗಳಿಸಿದರು. ವೆರ್ನಾನ್ ಫಿಲೆಂಡರ್ ಅವರು 49 ಎಸೆತಗಳಲ್ಲಿ  48 ರನ್ ಗಳಿಸಿ ಎಲ್ಲರ ಗಮನ ಸೆಳೆದರು.  ಮಂಡಳಿ ಅಧ್ಯಕ್ಷರ ಇಲೆವೆನ್ ಪರ ಧರ್ಮೇಂದ್ರ ಸಿನ್ಹ್‌ ಜಡೇಜಾ ಮೂರು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: 
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್‌: 64 ಓವರ್‌ಗಳಲ್ಲಿ 279/6 (ಏಡೆನ್ ಮರ್ಕರಮ್ 100, ತೆಂಬಾ ಬವುಮಾ ಔಟಾಗದೆ 87, ವೆರ್ನಾನ್ ಫಿಲೆಂಡರ್ 48; ಧರ್ಮೇಂದ್ರ ಜಡೇಜಾ 66 ಕ್ಕೆ 3)


ಮಂಡಳಿ ಅಧ್ಯಕ್ಷರ ಇಲೆವೆನ್
ಪ್ರಥಮ ಇನಿಂಗ್ಸ್‌: 64 ಓವರ್‌ಗಳಲ್ಲಿ 265/8 (ಶ್ರೀಕಾರ್ ಭರತ್ 71, ಪ್ರಿಯಾಂಕ್ ಪಾಂಚಲ್ 60, ಸಿದ್ದೇಶ್ ಲಾಡ್ ಔಟಾಗದೆ 52, ಮಯಾಂಕ್ ಅಗರ್ವಾಲ್ 39; ಕೇಶವ್ ಮಹರಾಜ್ 35 ಕ್ಕೆ 3, ವೆರ್ನಾನ್ ಫಿಲೆಂಡರ್ 27 ಕ್ಕೆ 2)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com