ಕ್ರಿಕೆಟ್: ಗೋಗರೆದು ಶ್ರೀಲಂಕಾ ತಂಡ ಕರೆಸಿಕೊಂಡ ಪಾಕಿಸ್ತಾನಕ್ಕೆ ಹೀಗಾಗಬಾರದಿತ್ತು!

ಉಗ್ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಸಂಪೂರ್ಣ ಸ್ಥಗಿತವಾಗಿದ್ದ ಕ್ರಿಕೆಟ್ ಗೆ ಶ್ರೀಲಂಕಾ ಪ್ರವಾಸ ಮರು ಜೀವ ನೀಡಿದೆಯಾದರೂ, ಪಾಕಿಸ್ತಾನಕ್ಕೆ ವರುಣದೇವ ಇನ್ನಿಲ್ಲದಂತೆ ಕಾಟ ನೀಡುತ್ತಿದ್ದಾನೆ.
ಕರಾಚಿ ಮೈದಾನ ಮತ್ತು ಮಳೆ
ಕರಾಚಿ ಮೈದಾನ ಮತ್ತು ಮಳೆ

ಮಳೆಯಿಂದಾಗಿ 2 ಏಕದಿನ ಪಂದ್ಯಗಳು ಮುಂದೂಡಿಕೆ, ಪಾಕಿಸ್ತಾನದ ಕಾಲೆಳೆದ ಐಸಿಸಿ

ಕರಾಚಿ: ಉಗ್ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಸಂಪೂರ್ಣ ಸ್ಥಗಿತವಾಗಿದ್ದ ಕ್ರಿಕೆಟ್ ಗೆ ಶ್ರೀಲಂಕಾ ಪ್ರವಾಸ ಮರು ಜೀವ ನೀಡಿದೆಯಾದರೂ, ಪಾಕಿಸ್ತಾನಕ್ಕೆ ವರುಣದೇವ ಇನ್ನಿಲ್ಲದಂತೆ ಕಾಟ ನೀಡುತ್ತಿದ್ದಾನೆ.

ಹೌದು.. ಉಗ್ರ ದಾಳಿಯ ಬೆದರಿಕೆ ಬಳಿಕ ಶ್ರೀಲಂಕಾ ಕ್ರಿಕೆಟ್ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದರು. ಆದರೆ ಆಟಗಾರರಿಗೆ ಭದ್ರತೆ ಕಲ್ಪಿಸುವುದಾಗಿ ಹೇಳಿ ಗೋಗರೆದು ಶ್ರೀಲಂಕಾ ತಂಡವನ್ನು ತನ್ನ ದೇಶಕ್ಕೆ ಕರೆಸಿಕೊಂಡಿದ್ದ ಪಾಕಿಸ್ತಾನಕ್ಕೆ ವರುಣದೇವ ಮರ್ಮಾಘಾತ ನೀಡಿದ್ದು, ಉಗ್ರ ಉಪಟಳಕ್ಕಿಂತ ಮಳೆಯ ಉಪಟಳವೇ ಹೆಚ್ಚಾಗಿ ಹೋದಂತಿದೆ.

ಈ ಹಿಂದೆ ಮಳೆಯ ಕಾರಣದಿಂದಾಗಿ ಇಂದು ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯವನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿತ್ತು. ಆದರೆ ಇದೀಗ ಎರಡನೇ ದಿನವೂ ಮಳೆಯ ಕಾಟ ಆರಂಭವಾಗಿದ್ದು, ಮೊದಲ ಮತ್ತು ಎರಡನೇ ಏಕದಿನ ಪಂದ್ಯದ ವೇಳಾಪಟ್ಟಿಯನ್ನೇ ಬದಲಿಸುವಂತಾಗಿದೆ. ಕರಾಚಿಯಲ್ಲಿ ಮೊದಲ ಪಂದ್ಯ ನಡೆಯಬೇಕಿತ್ತು. ಈ ಪಂದ್ಯವನ್ನು ಇದೀಗ ಮುಂದೂಡಲಾಗಿದೆ.

ಇನ್ನು ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪಾಕಿಸ್ತಾನ ಕ್ರಿಕೆಟ್ ನ ಕಾಲೆಳೆದಿದ್ದು, ಕರಾಚಿ ಪಂದ್ಯ ಮಳೆಗೆ ಬಲಿಯಾಗಿದ್ದರ ಬಗ್ಗೆ ಫನ್ನಿ ಟ್ವೀಟ್ ಮಾಡಿದೆ. ಕರಾಚಿಯಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ ಎರಡು ದಿನಗಳ ನಂತರ ನಡೆಯಬೇಕಿದ್ದ ಪಂದ್ಯವನ್ನೂ ಮಳೆ ಕೊಚ್ಚಿಕೊಂಡು ಹೋಗಿದ್ದನ್ನ ಎಂದಾದರೂ ಕೇಳಿದ್ದೀರಾ ಎಂದು ಐಸಿಸಿ ಟ್ವೀಟ್ ಮಾಡಿದೆ.

ಶ್ರೀಲಂಕಾ ವಿರುದ್ಧದ ಸರಣಿ ಪಾಕಿಸ್ತಾನಕ್ಕೆ ಭಾರೀ ಪ್ರಮುಖವಾದದ್ದು. 2009ರಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಪಾಕ್ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ಹಲವು ದೇಶಗಳು ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಭಯಪಡುತ್ತಿವೆ. 2009ರ ನಂತರ 2015ರಲ್ಲಿ ಜಿಂಬಾಬ್ವೆ ಮಾತ್ರ ಪಾಕ್ ಪ್ರವಾಸ ಕೈಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com