ಕೊಹ್ಲಿ, ಸ್ಮಿತ್ ಹಿಂದಿಕ್ಕಿದ ನೇಪಾಳ ಕ್ಯಾಪ್ಟನ್ ಪರಾಸ್‌ ಖಾಕ್ಡಾ ವಿಶಿಷ್ಟ ದಾಖಲೆ!

ಮೌಂಟ್‌ ಎವರೆಸ್ಟ್‌ನ ತವರೂರು ನೇಪಾಳ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ಗೆ ನಾಯಕ ಪರಾಸ್‌ ಖಾಕ್ಡಾ ಭಾಜನರಾಗಿದ್ದಾರೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್‌ ಜಯ ತಂದುಕೊಟ್ಟ ಖಾಕ್ಡಾ, ಟಿ-20-ಐ ಪಂದ್ಯದಲ್ಲಿ ರನ್‌ ಚೇಸಿಂಗ್‌ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಹೊಂದಿದರು.
ಪರಾಸ್‌ ಖಾಕ್ಡಾ
ಪರಾಸ್‌ ಖಾಕ್ಡಾ

ಸಿಂಗಾಪುರ:  ಮೌಂಟ್‌ ಎವರೆಸ್ಟ್‌ನ ತವರೂರು ನೇಪಾಳ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪ್ರಪ್ರಥಮ ಶತಕ ಸಿಡಿಸಿದ ದಾಖಲೆ ಗೆ ನಾಯಕ ಪರಾಸ್‌ ಖಾಕ್ಡಾ ಭಾಜನರಾಗಿದ್ದಾರೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ 9 ವಿಕೆಟ್‌ ಜಯ ತಂದುಕೊಟ್ಟ ಖಾಕ್ಡಾ, ಟಿ-20-ಐ ಪಂದ್ಯದಲ್ಲಿ ರನ್‌ ಚೇಸಿಂಗ್‌ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ.

ಶನಿವಾರ ನಡೆದ ತ್ರಿಕೋನ ಟಿ-20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಸಿಂಗಾಪುರ ತನ್ನ ಪಾಲಿನ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 151 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ನೇಪಾಳ ತಂಡ 16 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟದಲ್ಲಿ 154 ರನ್‌ಗಳನ್ನು ಚೆಚ್ಚಿ ವಿಜಯೋತ್ಸವ ಆಚರಿಸಿತು.

ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಅನುಭವಿ ಬ್ಯಾಟ್ಸ್‌ಮನ್‌ ಖಾಕ್ಡಾ, ಕೇವಲ 52 ಎಸೆತಗಳಲ್ಲಿ ಅಜೇಯ 106 ರನ್‌ಗಳನ್ನು ಸಿಡಿಸಿ ವಿಶ್ವ ದಾಖಲೆಯೊಂದಿಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅವರ ಈ ಅದ್ಭುತ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಬರೋಬ್ಬರಿ 9 ಸಿಕ್ಸರ್‌ಗಳು ಮೂಡಿಬಂದವು. ಇದೇ ವೇಳೆ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿದ ಖಾಕ್ಡಾ, ಏಷ್ಯಾದ ನಾಲ್ಕನೇ ಅತ್ಯಂತ ವೇಗದ ಶತಕದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೆ ಮುನ್ನ ಈ ವರ್ಷಾರಂಭದಲ್ಲಿ  ನೇಪಾಳ ತಂಡದ ಯುವ ಪ್ರತಿಭೆ ರೋಹಿತ್‌ ಪೌದೆಲ್‌ (16 ವರ್ಷ, 146 ದಿನಗಳು), ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕದ ಬಾರಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಪಾಕಿಸ್ತಾನದ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ರೋಹಿತ್‌ ಈ ಸಾಧನೆ ಮಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com