ಭಾರತ ವಿರುದ್ಧದ ಸರಣಿ ಕಠಿಣವಾಗಲಿದೆ: ದಕ್ಷಿಣ ಆಫ್ರಿಕಾದ ವೇಗಿ ವರ್ನಾನ್ ಫಿಲಾಂಡರ್

ಮುಂಬರುವ ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿ ಕಠಿಣಕರವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ವೇಗಿ ವರ್ನಾಲ್ ಫಿಲಾಂಡರ್ ಅಭಿಪ್ರಾಯ ಪಟ್ಟಿದ್ದಾರೆ. ಮಧ್ಯದಲ್ಲಿ ಸಮಯವನ್ನು ಕಳೆಯುವ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವರ್ನಾಲ್ ಫಿಲಾಂಡರ್
ವರ್ನಾಲ್ ಫಿಲಾಂಡರ್

ದುಬೈ: ಮುಂಬರುವ ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿ ಕಠಿಣಕರವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ವೇಗಿ ವರ್ನಾಲ್ ಫಿಲಾಂಡರ್ ಅಭಿಪ್ರಾಯ ಪಟ್ಟಿದ್ದಾರೆ. ಮಧ್ಯದಲ್ಲಿ ಸಮಯವನ್ನು ಕಳೆಯುವ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಬೋರ್ಡ್  ಫ್ರೆಸಿಡೆಂಟ್ಸ್  ಇಲೆವೆನ್  ನಡುವಿನ ಮೂರು ದಿನಗಳ ತರಬೇತಿ ಪಂದ್ಯ ಮುಕ್ತಾಯಗೊಂಡ ಬಳಿಕ ಫಿಲಾಂಡರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಭಾರತ ವಿರುದ್ಧದ ಸರಣಿ ನಿಜಕ್ಕೂ ಕಠಿಣಕರವಾಗಲಿದೆ. ಆದ್ದರಿಂದ ಪಂದ್ಯದ ಮಧ್ಯ ಭಾಗದಲ್ಲಿ ಹೆಚ್ಚಿನ ಸಮಯ ಕಳೆಯುವುದು ಉತ್ತಮಕರವಾಗಲಿದೆ ಎಂದು ಅವರು ಹೇಳಿದ್ದಾರೆ. 

ತರಬೇತಿ ಪಂದ್ಯದಲ್ಲಿ ದಶ್ರಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ಎದುರಾಳಿ ತಂಡ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿತು, ಫಿಲಾಂಡರ್ 48 ರನ್ ಗಳಿಸಿದರಲ್ಲದೇ, 27 ರನ್ ಗಳಿಗೆ 2 ವಿಕೆಟ್ ಪಡೆದುಕೊಂಡರು.

ಹಸೀಮ್ ಆಮ್ಲಾ ಹಾಗೂ ಡೆಲ್ ಸ್ಟೈಯಿನ್ ನಿವೃತ್ತ ನಂತರ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಆಡುತ್ತಿರುವ ಮೊದಲ ಟೆಸ್ಟ್ ಸರಣಿಯಾಗಿದೆ. ಈ ಸರಣಿ ಇತರ  ಹಿರಿಯ ಆಟಗಾರರು ಮ್ಯಾಚ್ ವಿನ್ನಿಂಗ್ ಕಾರ್ಯಕ್ಷಮತೆ ತೋರಿಸಲು ವೇದಿಕೆಯಾಗಲಿದೆ. ಉತ್ತಮ ಪ್ರದರ್ಶನ ನೀಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಆದರೆ ಆಟಗಾರರ ಮೇಲೆ ತುಂಬಾ ಒತ್ತಡವಿರಲಿದೆ ಎಂದು ಅವರು ಹೇಳಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವಿಶ್ವ ಟೆಸ್ಟ್ ಚಾಂಫಿಯನ್ ಶಿಪ್ ಭಾಗವಾಗಲಿದ್ದು, ಹೊಸ ಆಯಾಮ ನೀಡಲಿದೆ. ಭಾರತದ ನೆಲದಲ್ಲಿ ಆಡುವುದು ಕಠಿಣವಾಗಲಿದೆ. ಆದರೆ, ದಕ್ಷಿಣ ಆಫ್ರಿಕಾಕಕ್ಕೆ ಪರ್ಯಾಯ ಮಾರ್ಗವಿಲ್ಲ. ಅವರ ನೆಲದಲ್ಲಿಯೇ ದೊಡ್ಡ ಆಘಾತ ನೀಡುತ್ತೇವೆ. ಈ ಸವಾಲನ್ನು  ಎದುರಿಸಲು ಎಲ್ಲ ಆಟಗಾರರು ಸಿದ್ಧರಿದ್ದೇವೆ ಎಂದು ಫಿಲಾಂಡರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com