ಕೊರೋನಾ ವಿರುದ್ಧ ಹೋರಾಟ: ಪಾಕ್'ಗೂ ಸಹಾಯ ಮಾಡಿ ಎಂದ ಯುವಿ ವಿರುದ್ಧ ಅಭಿಮಾನಿಗಳ ತೀವ್ರ ಕಿಡಿ

ಕೊರೋನಾ ವೈರಸ್ ವಿರುದ್ಧದ ಹೋರಾಟದೊಂದಿಗೆ ಕೈಜೋಡಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು, ಅನಗತ್ಯವಾಗಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದೊಂದಿಗೆ ಕೈಜೋಡಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು, ಅನಗತ್ಯವಾಗಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಕೊರೋನಾ ವೈರಸ್ ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಭಾರತಕ್ಕೂ ತಟ್ಟಿದೆ. ವೈರಸ್ ಮಟ್ಟಹಾಕಲು ದೇಶ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವಲ್ಲೂ ಸೋಂಕಿತರು ಮರಣವನ್ನಪ್ಪುತ್ತಿರುವರ ಸಂಖ್ಯೆ ಹಾಗೂ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಸರ್ಕಾರಕ್ಕೆ ಸಹಾಯ ಹಸ್ತ ಚಾಚಿದ್ದು, ತಮ್ಮ ಕೈಲಾದ ಧನ ಸಹಾಯಗಳನ್ನು ಮಾಡುತ್ತಿದ್ದಾರೆ. 

ಪ್ರಧಾನಮಂತ್ರಿಗಳ ಸಹಾಯ ನಿಧಿಗೆ ಜನರು ತಮ್ಮಿಂದ ಆದಷ್ಟು ಧನ ಸಹಾಯ ಮಾಡುತ್ತಿದ್ದಾರೆ. ಇದರಂತೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಸಾಮಾಜಿಕ ಕಳಕಳಿಯನ್ನು ತೋರಿಸಿದ್ದು, ಯುವಿಕ್ಯಾನ್ ಫೌಂಡೇಷನ್ ಮೂಲಕ ದೇಣಿಗೆ ಸಂಗ್ರಹಿಸಿ ನಿರ್ಗತಿಕರು ಹಾಗೂ ಬಡವರಿಗೆ ನೆರವಾಗುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ಕೂ ಅಭಿಮಾನಿಗಳು ಪ್ರಶಂಸಿಸಿದ್ದಾರೆ, ಆದರೆ. ಯುವಿ ಇದೀಗ ನೀಡಿರುವ ಕರೆಯೊಂದಕ್ಕೆ ಅಭಿಮಾನಿಗಳು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. 

ಮಾಜಿ ಸಹ ಆಟಗಾರ ಹರ್ಭಜನ್ ಸಿಂಗ್ ಅವರ ಕೋರಿಕೆ ಮೇರೆಗೆ ಪಾಕಿಸ್ತಾನದಲ್ಲಿರುವ ಬಡ ಜನತೆಗೆ ನೆರವಾಗಲು ಅಫ್ರಿದಿ ಫೌಂಡೇಷನ್ಗೆ ಸಹಾಯ ಮಾಡಿ ಎಂದು ಯುವರಾಜ್ ಸಿಂಗ್ ಅವರು ಮನವಿ ಮಾಡಿಕೊಂಡಿರುವುದು ಇದೀಗ ಅಭಿಮಾನಿಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಯುವರಾಜ್ ಸಿಂಗ್ ಅವರ ಈ ಕರೆಗೆ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದು, ನಿಮ್ಮ ಮೇಲಿದ್ದ ಅಭಿಮಾನವೆಲ್ಲಾ ಇಂದಿಗೇ ಕೊನೆಗೊಂಡಿದೆ. ಭಾರತೀಯರು ದೇಣಿಗೆ ನೀಡಿರುವ ಹಣದಲ್ಲಿ ನೀವು ಪಾಕಿಸ್ತಾನಕ್ಕೆ ನೆರವು ನೀಡುತ್ತೀರಾ? ಪಾಕಿಸ್ತಾನಿಗಳಿಗೆ ಧನ ಸಹಾಯ ಮಾಡಿ ಎಂದು ಹೇಗೆ ಮನವಿ ಮಾಡುತ್ತೀರಿ? ನಿಮಗೆ ಬುದ್ಧಿ ಇಲ್ಲವೇ?,,,

ನನ್ನನ್ನು ಕ್ಷಮಿಸಿ...ನಿಮ್ಮ ಅಭಿಮಾನಿಯಾಗಿದ್ದೆ ಎಂದು ಹೇಳುಕೊಳ್ಳುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ. ಭಾರತದ ವಿರುದ್ಧ ಪಿತೂರಿ ನಡೆಸುವ ದೇಶಕ್ಕೆ ನೀವು ಬೆಂಬಲ ನೀಡುತ್ತೀರಾ? 

ಭಾರತದ ವಿರುದ್ಧ ಭಯೋತ್ಪಾದನೆ ನಡೆಸಿ ದಾಳಿ ನಡೆಸುವ ಪಾಕಿಸ್ತಾನಕ್ಕೆ ನಾನು ಶ್ರಮಪಟ್ಟ ಹಣವನ್ನು ನೀಡಬೇಕೆ. ನಿಮ್ಮ ಮೇಲಿದ್ದ ಎಲ್ಲಾ ಗೌರವ ಹಾಳಾಯಿತು ಯುವಿ  ಎಂದೆಲ್ಲಾ ಕಿಡಿಕಾರಲು ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com