ಈ ದಿನ 28 ವರ್ಷಗಳ ಬಳಿಕ 2ನೇ ಬಾರಿಗೆ ಭಾರತ ವಿಶ್ವಕಪ್ ಗೆದ್ದ ಸುದಿನ

ಧೋನಿ ಅವರ ಫಿನಿಶಿಂಗ್ ಸ್ಟೈಲ್ ಮತ್ತು ಕಿಕ್ಕಿರಿದು ತುಂಬಿದ ಜನ ಸಾಗರದ ಮುಂದೆ ಟೀಮ್ ಇಂಡಿಯಾ 28 ವರ್ಷಗಳ ನಂತರ ಐಸಿಸಿ ಏಕದಿನ ವಿಶ್ವ ಕಪ್ ಅನ್ನು ಮುಡಿಗೇರಿಸಿಕೊಂಡಿತು.
ಟೀಂ ಇಂಡಿಯಾ
ಟೀಂ ಇಂಡಿಯಾ

ಮುಂಬೈ: ಧೋನಿ ಅವರ ಫಿನಿಶಿಂಗ್ ಸ್ಟೈಲ್ ಮತ್ತು ಕಿಕ್ಕಿರಿದು ತುಂಬಿದ ಜನ ಸಾಗರದ ಮುಂದೆ ಟೀಮ್ ಇಂಡಿಯಾ 28 ವರ್ಷಗಳ ನಂತರ ಐಸಿಸಿ ಏಕದಿನ ವಿಶ್ವ ಕಪ್ ಅನ್ನು ಮುಡಿಗೇರಿಸಿಕೊಂಡಿತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ವೇಗಿ ನುವಾನ್ ಕುಲಸೇಕರ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ, 2011ರ ವಿಶ್ವ ಕಪ್ ಗೆದ್ದುಕೊಂಡಿತು ಎಂದು ಅಂದು ವೀಕ್ಷಕ ವಿವರಣೆಗಾರರಾಗಿದ್ದ ರವಿಶಾಸ್ತ್ರಿ ಹೇಳುತ್ತಿದ್ದಂತೆಯೇ ಲಕ್ಷಾಂತರ ಕ್ರೀಡಾಭಿಮಾನಿಗಳ ಕಿವಿ ನೆಟ್ಟಿಗಾಗಿತ್ತು.

ಹೌದು.. ಭಾರತ ತಂಡ ಎರಡನೇ ವಿಶ್ವಕಪ್ ಗೆದ್ದ ಸುದಿನ ಇಂದು. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ, ಮೊದಲ ಬಾರಿ ಏಕದಿನ ವಿಶ್ವಕಪ್ ಮುಡಿಗೇರಿಸಿತೊಂಡಿತ್ತು. ಆನಂತರ ಭಾರತ ಪ್ರಶಸ್ತಿ ಗೆಲ್ಲಲು ನಡೆಸಿದ ಯತ್ನಗಳೆಲ್ಲವೂ ವಿಫಲಗೊಂಡಿದ್ದವು. ಆದರೆ ಧೋನಿ ಸಾರಥ್ಯದ ಟೀಮ್ ಇಂಡಿಯಾ 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಸಚಿನ್ ತೆಂಡೂಲ್ಕರ್ ಗೆ ಅರ್ಪಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com